[ಚುಟುಕು] ಕುಡಿದ ಮತ್ತಿನಲ್ಲಿ ಮಾಡಿದ ಅಪಘಾತ ಸಣ್ಣ ಪ್ರಮಾಣದ್ದು ಎಂದ ಮಾತ್ರಕ್ಕೆ ಚಾಲಕನಿಗೆ ಸೈರಣೆ ತೋರಲಾಗದು: ಸುಪ್ರೀಂ

[ಚುಟುಕು] ಕುಡಿದ ಮತ್ತಿನಲ್ಲಿ ಮಾಡಿದ ಅಪಘಾತ ಸಣ್ಣ ಪ್ರಮಾಣದ್ದು ಎಂದ ಮಾತ್ರಕ್ಕೆ ಚಾಲಕನಿಗೆ ಸೈರಣೆ ತೋರಲಾಗದು: ಸುಪ್ರೀಂ
Published on

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಯಾವುದೇ ಗಂಭೀರ ಸ್ವರೂಪದ ಅಪಘಾತ ಸಂಭವಿಸಿಲ್ಲ, ಜೀವಹಾನಿಯಾಗಿಲ್ಲ ಎಂದ ಮಾತ್ರಕ್ಕೆ ಅಂತಹ ಕೃತ್ಯಕ್ಕೆ ಕಾರಣನಾದ ಚಾಲಕನ ಬಗ್ಗೆ ಸಹಾನುಭೂತಿ ತೋರಲಾಗದು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಕುಡಿದು ವಾಹನ ಚಲಾಯಿಸುವುದು ಕೇವಲ ದುರ್ವರ್ತನೆ ಮಾತ್ರವೇ ಅಲ್ಲ, ಅದು ಅಪರಾಧ ಕೂಡ ಎಂದು ನ್ಯಾ. ಎಂ ಆರ್ ಶಾ ಮತ್ತು ನ್ಯಾ. ಬಿ ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಹೆಚ್ಚಿನ ಮಾಹಿತಿಗೆ ಬಾರ್‌ ಅಂಡ್‌ ಬೆಂಚ್‌ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com