ಪತ್ನಿ ಸಾವಿನ ಪ್ರಕರಣದಿಂದ ಪತಿ ಖುಲಾಸೆಯಾದರೂ ಕ್ರೌರ್ಯ ಸಾಬೀತಿಗೆ ಪತ್ನಿಯ ಡೈಯಿಂಗ್ ಡಿಕ್ಲರೇಷನ್ ಒಪ್ಪಬಹುದು: ಸುಪ್ರೀಂ

ಆದರೂ, ಐಪಿಸಿ ಸೆಕ್ಷನ್ 498- ಎಗೆ ಸಂಬಂಧಿಸಿದಂತೆ ಒಪ್ಪಿಕೊಳ್ಳಲು ಕೋರಿರುವ ಸಾಕ್ಷ್ಯ ಸಾವಿನ ಪ್ರಕ್ರಿಯೆ ಸಂದರ್ಭಗಳಿಗೆ ಸಂಬಂಧಿಸಿದೆ ಎಂಬುದಾಗಿ ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
CJI NV Ramana, Justice AS Bopanna and Justice Hima kohli
CJI NV Ramana, Justice AS Bopanna and Justice Hima kohli
Published on

ಹೆಂಡತಿ ಸಾವಿನ ಪ್ರಕರಣದಲ್ಲಿ ಪತಿ ಖುಲಾಸೆಗೊಂಡಿದ್ದರೂ ಕೂಡ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯ ಸಾಬೀತುಪಡಿಸಲು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 32(1) ರ ಅಡಿಯಲ್ಲಿ ಹೆಂಡತಿಯ ಡೈಯಿಂಗ್‌ ಡಿಕ್ಲರೇಷನ್‌ (ಮರಣ ಹೊಂದುವ ಮುನ್ನ ನೀಡುವ ಹೇಳಿಕೆ) ಬಳಸಬಹುದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. [ಸುರೇಂದ್ರನ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಆದರೂ ಇದು ಎರಡು ಪೂರ್ವ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿತು:

1. ಹೆಂಡತಿಯ ಸಾವಿನ ಕಾರಣ ಪ್ರಕರಣದಲ್ಲಿ ಸವಾಲಾಗಿರಬೇಕು.

2. ಐಪಿಸಿ ಸೆಕ್ಷನ್ 498- ಎಗೆ ಸಂಬಂಧಿಸಿದಂತೆ ಒಪ್ಪಿಕೊಳ್ಳಲು ಕೋರಿರುವ ಸಾಕ್ಷ್ಯ ಸಾವಿನ ಪ್ರಕ್ರಿಯೆ ಸಂದರ್ಭಗಳಿಗೆ ಸಂಬಂಧಿಸಿದೆ ಎಂದು ಪ್ರಾಸಿಕ್ಯೂಷನ್‌ ಸಾಬೀತುಪಡಿಸಬೇಕಾಗುತ್ತದೆ.

Also Read
ಮನೆ ಕಟ್ಟಲು ಹಣ ಕೇಳುವುದು ವರದಕ್ಷಿಣೆ ಬೇಡಿಕೆ: ಸುಪ್ರೀಂ ಕೋರ್ಟ್

ವರದಕ್ಷಿಣೆ ಸಾವಿಗೆ ಸಂಬಂಧಿಸಿದಂತೆ ಐಪಿಸಿಯ ಸೆಕ್ಷನ್ 304 ಬಿ ಅಡಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಐಪಿಸಿಯ ಸೆಕ್ಷನ್ 498 ಎ ಅಡಿ ಒಂದು ವರ್ಷ ಕಠಿಣ ಸಜೆ ವಿಧಿಸಿದ್ದ ಕೇರಳ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣೆಯ ಕೊನೆಗೆ, ಸೆಕ್ಷನ್ 498 ಎ ಅಡಿಯಲ್ಲಿ ಮೇಲ್ಮನವಿದಾರನನ್ನು ದೋಷಿ ಎಂದು ಪರಿಗಣಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಹೈಕೋರ್ಟ್ ತೀರ್ಪನ್ನು ಅದು ದೃಢಪಡಿಸಿತು.

Kannada Bar & Bench
kannada.barandbench.com