ಸತ್ಯೇಂದರ್‌ ಜೈನ್ ವಿಚಾರಣೆ ವೇಳೆ ವಕೀಲರ ಹಾಜರಿಗೆ ಅನುಮತಿ ನೀಡಿದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಇ ಡಿ

ಜೈನ್ ಅವರ ವಿಚಾರಣೆ ನಡೆಯುವಾಗ ದೂರದಲ್ಲಿ ವಕೀಲರೊಬ್ಬರು ಉಪಸ್ಥಿತರಿಬೇಕು. ಅವರಿಗೆ ವಿಚಾರಣೆ ನಡೆಯುತ್ತಿರುವುದು ಕಾಣಬೇಕೆ ಹೊರತು ಕೇಳಬಾರದು ಎಂದು ವಿಶೇಷ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು.
Satyendar Jain
Satyendar Jain Facebook
Published on

ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್‌ ಜೈನ್‌ ಅವರನ್ನು ವಿಚಾರಣೆ ನಡೆಸುವಾಗ ಸಚಿವರೊಂದಿಗೆ ವಕೀಲರು ಹಾಜರಿರಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ.

ಇ ಡಿ ಪರವಾಗಿ ವಕೀಲ ಜೊಹೆಬ್ ಹೊಸೈನ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಅವರೆದುರು ಮನವಿ ಪ್ರಸ್ತಾಪಿಸಿದರು.

Also Read
ಹವಾಲಾ ಹಣ ಪ್ರಕರಣ: ಆಪ್‌ ಸಚಿವ ಸತ್ಯೇಂದರ್‌ ಜೈನ್‌ರನ್ನು ಜೂನ್‌ 9ರವರೆಗೆ ಇ ಡಿ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

"ಮೇ 31 ರಂದು ಜೈನ್ ಅವರನ್ನು ಇ ಡಿ ವಶಕ್ಕೆ ನೀಡಲಾಗಿದೆ. ವಕೀಲರು ಮತ್ತಿತರರು ಉಪಸ್ಥಿತಿರಿರಬೇಕು ಎಂಬಂತಹ ಕೆಲವು ಷರತ್ತುಗಳನ್ನು ಹಾಕಲಾಗಿದೆ. ಇದು ನಮಗೆ ನೀಡಲಾದ ಕಸ್ಟಡಿಗೆ ಧಕ್ಕೆ ತರುತ್ತದೆ" ಎಂದು ಹೊಸೈನ್ ಹೇಳಿದರು. ಶುಕ್ರವಾರ ಪ್ರಕರಣದ ವಿಚಾರಣೆಗೆ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಸತ್ಯೇಂದ್ರ ಜೈನ್‌ ಅವರನ್ನು ಜೂನ್ 9ರವರೆಗೆ ಇ ಡಿ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಕಳೆದ ವಾರ ಆದೇಶ ನೀಡಿತ್ತು. ಆದರೆ ಜೈನ್‌ ಅವರ ವಿಚಾರಣೆ ನಡೆಯುವಾಗ ದೂರದಲ್ಲಿ ವಕೀಲರೊಬ್ಬರು ಉಪಸ್ಥಿತರಿಬೇಕು. ಅವರಿಗೆ ವಿಚಾರಣೆ ನಡೆಯುತ್ತಿರುವುದು ಕಾಣಬೇಕೆ ಹೊರತು ಕೇಳಬಾರದು ಎಂದು ವಕೀಲರ ಕೋರಿಕೆ ಮೇರೆಗೆ ನ್ಯಾಯಾಲಯ ಆದೇಶಿಸಿತ್ತು.

Kannada Bar & Bench
kannada.barandbench.com