ಆಸ್ತಿ ತೆರಿಗೆ ವಿನಾಯಿತಿಗೆ ಪ್ರತಿ ವರ್ಷ ಶೈಕ್ಷಣಿಕ ಸಂಸ್ಥೆಗಳು ಸರ್ಟಿಫಿಕೇಟ್‌ ಪಡೆಯುವ ಅಗತ್ಯವಿಲ್ಲ: ಹೈಕೋರ್ಟ್‌

ಕೆಎಂಸಿ ಕಾಯಿದೆಯಡಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆ ವಿನಾಯಿತಿ ಪರಿಪೂರ್ಣವಾದುದು. ವಿನಾಯಿತಿ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದಿದ್ದ ಶಿಕ್ಷಣ ಸಂಸ್ಥೆ ಪರ ವಕೀಲರು.
Karnataka HC, Kalburgi Bench
Karnataka HC, Kalburgi Bench
Published on

ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ ಸೆಕ್ಷನ್ 94(1-ಎ)(ಐ) ಅಡಿ ಶೈಕ್ಷಣಿಕ ಸಂಸ್ಥೆಗಳು ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿ ವಿನಾಯಿತಿಗಾಗಿ ಸರ್ಟಿಫಿಕೇಟ್‌ ಪಡೆಯಬೇಕಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶಿಸಿದೆ.

ವಿಜಯಪುರ ನಗರಸಭೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ  ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ. ಅಲ್ಲದೇ, ನಗರಸಭೆ ಸೆಕ್ಷನ್ 142(1)(ವಿ) ಅನ್ವಯ ತೆರಿಗೆ ಬಾಕಿ ಹಣ ಪಾವತಿಸುವಂತೆ ಕೋರಿ ನೀಡಿದ್ದ ಬೇಡಿಕೆ ನೋಟಿಸ್ ಅನ್ನು ರದ್ದುಗೊಳಿಸಿದೆ.

ಅರ್ಜಿದಾರರ ಪರ ವಕೀಲರು, ಕರ್ನಾಟಕ ಮುನಿಸಿಪಾಲಿಟಿ ಕಾಯಿದೆ ಸೆಕ್ಷನ್ 94(1-ಎ)(ಐ) ಅಡಿ ಶೈಕ್ಷಣಿಕ ಸಂಸ್ಥೆಗಳ ಆಸ್ತಿ ತೆರಿಗೆ ಪಾವತಿಗೆ ಬ್ಲಾಂಕೆಟ್  ವಿನಾಯಿತಿ ಇಲ್ಲ. ಅವು ಪ್ರತಿ ವರ್ಷ ವಿನಾಯಿತಿ ಕೋರಿ ಸಿಎಂಸಿಯಿಂದ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಬೇಕು. ಆ ಬಗ್ಗೆ ಪರಿಶೀಲಿಸುವ ಸಿಎಂಸಿ ತನಗೆ ಎಲ್ಲ ಮಾನದಂಡಗಳು ಸರಿಯಾಗಿವೆಯೇ ಎಂಬುದು ಮನವರಿಕೆಯಾದರೆ ಸರ್ಟಿಫಿಕೇಟ್‌ ವಿತರಿಸಲಿದೆ ಎಂದು ವಾದಿಸಿದ್ದರು.

ಅಲ್ಲದೆ, ಸರ್ಟಿಫಿಕೇಟ್‌ ಇಲ್ಲದೆ, ತೆರಿಗೆ ಪಾವತಿದಾರರು ಯಾವುದೇ ರೀತಿಯಲ್ಲೂ ಸ್ವಯಂ ಪ್ರೇರಿತವಾಗಿ ತೆರಿಗೆ ಪಾವತಿಯಿಂದ ವಿನಾಯಿತಿ ಕೋರಲಾಗದು ಎಂದು ತಿಳಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಶಿಕ್ಷಣ ಸಂಸ್ಥೆಯ ಪರ ವಕೀಲರು, ಕೆಎಂಸಿ ಕಾಯಿದೆಯಡಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆ ವಿನಾಯಿತಿ ಪರಿಪೂರ್ಣವಾದುದು. ವಿನಾಯಿತಿ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸೆಕ್ಷನ್ 94(1-ಎ)(ಐ) ಅಡಿ ಸ್ವಯಂಪ್ರೇರಿತವಾಗಿ ವಿನಾಯಿತಿ ಸಿಗಲಿದೆ ಎಂದು ವಾದಿಸಿದ್ದರು.

Attachment
PDF
City Municipal Council Vs Akbar Patel.pdf
Preview
Kannada Bar & Bench
kannada.barandbench.com