ಚುನಾವಣಾ ಪೂರ್ವದಲ್ಲಿ ಉಚಿತ ಕೊಡುಗೆ ಘೋಷಣೆ: ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠದಿಂದ ವಿಚಾರಣೆ

ಈ ದೇಶದಲ್ಲಿ ನಿವೃತ್ತರಾದವರಿಗೆ ಅಥವಾ ನಿವೃತ್ತಲಾಗರಿರುವವರಿಗೆ ಯಾವುದೇ ಬೆಲೆ ಇಲ್ಲಎಂದ ಸಿಜೆಐ.
Justice DY Chandrachud
Justice DY Chandrachud
Published on

ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆ ನೀಡುವ ಘೋಷಣೆ ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠವು ಬುಧವಾರ ಹೇಳಿದೆ.

ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ನಿಯಂತ್ರಿಸಲು ಮತ್ತು ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನಕ್ಕೆ ಅವರನ್ನು ಹೊಣೆಗಾರರನ್ನಾಗಿಸಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ವಿಚಾರಣೆಯ ಸಂದರ್ಭದಲ್ಲಿ “ನ್ಯಾ. ಲೋಧಾರಂತಹ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಸಮಿತಿಯು ಸಮಿತಿಯ ನೇತೃತ್ವ ವಹಿಸಬೇಕು” ಎಂದು ಹಿರಿಯ ವಕೀಲ ವಿಕಾಸ್‌ ಸಿಂಗ್‌ ಹೇಳಿದರು. ಇದಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಈ ಕುರಿತು ಸಾಂವಿಧಾನಿಕ ಸಂಸ್ಥೆಯು ಸಮಿತಿಯ ನೇತೃತ್ವ ವಹಿಸಬೇಕು” ಎಂದರು. ಈ ವೇಳೆ ಸಿಜೆಐ ಅವರು “ಈ ವಿಚಾರದ ಕುರಿತು ಅಧ್ಯಯನ ನಡೆಸಲು ಭಾರತ ಸರ್ಕಾರವೇಕೆ ಸಮಿತಿ ರಚಿಸಬಾರದು” ಎಂದು ಪ್ರಶ್ನಿಸಿದರು. ಅಂತಿಮವಾಗಿ ಪೀಠವು ನ್ಯಾ. ಚಂದ್ರಚೂಡ್‌ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದರು.

ನಿವೃತ್ತಿಯಾಗಲಿರುವವರಿಗೆ ಈ ದೇಶದಲ್ಲಿ ಬೆಲೆಯಿಲ್ಲ

ಇನ್ನೇನು ಎರಡೇ ದಿನದಲ್ಲಿ ನಿವೃತ್ತರಾಗಲಿರುವ ನ್ಯಾ. ಎನ್‌ ವಿ ರಮಣ ಅವರು ಪ್ರಕರಣದ ವಿಚಾರಣೆಯ ಒಂದು ಹಂತದಲ್ಲಿ ಈ ದೇಶದಲ್ಲಿ ನಿವೃತ್ತರಾದವರಿಗೆ ಅಥವಾ ನಿವೃತ್ತಲಾಗರಿರುವವರಿಗೆ ಯಾವುದೇ ಬೆಲೆ ಇಲ್ಲ ಎಂದ ಹೇಳಿದ ಘಟನೆ ನಡೆಯಿತು.

ಹಿರಿಯ ವಕೀಲ ವಿಕಾಸ್‌ ಸಿಂಗ್ ಅವರು ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾ. ಲೋಧಾ ಅವರ ನೇತೃತ್ವದಲ್ಲಿ ಉಚಿತ ಕೊಡುಗೆಗಳ ಕುರಿತ ವಿಚಾರವನ್ನು ಪರಿಶೀಲಿಸಲು ಸಮಿತಿ ರಚಿಸಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಮಣ ಅವರು ಮೇಲಿನಂತೆ ಹೇಳಿದರು.

Kannada Bar & Bench
kannada.barandbench.com