ಬಿಜೆಪಿ ಹುಸಿ ಚುನಾವಣಾ ಭರವಸೆ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಅಲಾಹಾಬಾದ್‌ ಹೈಕೋರ್ಟ್‌ [ಚುಟುಕು]

ಬಿಜೆಪಿ ಹುಸಿ ಚುನಾವಣಾ ಭರವಸೆ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಅಲಾಹಾಬಾದ್‌ ಹೈಕೋರ್ಟ್‌ [ಚುಟುಕು]

Allahabad High Court

ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಭರವಸೆಗಳನ್ನು ಅವು ಈಡೇರಿಸದೇ ಇರುವುದಕ್ಕೆ ಶಿಕ್ಷೆ ವಿಧಿಸಲು ಯಾವುದೇ ಕಾನೂನು ಇಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಪುನರುಚ್ಚರಿಸಿದೆ.

2014ರ ಚುನಾವಣೆ ವೇಳೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಬಿಜೆಪಿ ವಿಫಲವಾಗಿದೆ ಎಂದು ಅರ್ಜಿದಾರ ಖುರ್ಷಿದುರೆಹಮಾನ್‌ ಎಸ್‌ ರೆಹಮಾನ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ದಿನೇಶ್‌ ಪಾಠಕ್‌ “ರಾಜಕೀಯ ಪಕ್ಷ ಪ್ರಕಟಿಸಿದ ಪ್ರಣಾಳಿಕೆ ಚುನಾವಣೆಯ ಸಮಯದಲ್ಲಿ ಆ ಪಕ್ಷದ ನೀತಿ ದೃಷ್ಟಿಕೋನ, ಭರವಸೆ ಮತ್ತು ಪ್ರತಿಜ್ಞೆಗಳ ಹೇಳಿಕೆ ಎಂಬುದು ಸ್ಪಷ್ಟವಾಗಿದೆ. ಅದು ಕರಾರು ಅಲ್ಲ. ಅದನ್ನು ನ್ಯಾಯಾಲಯದ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ. ಚುನಾವಣಾ ಪ್ರಣಾಳಿಕೆ ನೀಡಿದ ಭರವಸೆ ಈಡೇರಿಸಲು ವಿಫಲವಾದರೆ ಜಾರಿ ಅಧಿಕಾರಿಗಳ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನು ತರಲು ಯಾವುದೇ ದಂಡನಾ ಅವಕಾಶ ಇಲ್ಲ” ಎಂದು ಹೇಳಿದ್ದಾರೆ. ಆ ಮೂಲಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Related Stories

No stories found.