ಚುನಾವಣಾ ಮನವಿಗಳು ತುರ್ತು ಪ್ರಕರಣಗಳಲ್ಲ: ಸಿಜೆಐ ಎನ್‌ ವಿ ರಮಣ

ಚುನಾವಣಾ ಪ್ರಕರಣವೊಂದನ್ನು ತುರ್ತಾಗಿ ಆಲಿಸುವಂತೆ ಕೋರಿ ವಕೀಲರೊಬ್ಬರು ಸಿಜೆಐ ಅವರ ಪೀಠದ ಮುಂದೆ ಉಲ್ಲೇಖಿಸಿದ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
CJI NV Ramana and Supreme Court

CJI NV Ramana and Supreme Court

ಚುನಾವಣಾ ಪ್ರಕರಣಗಳು ತುರ್ತು ಆದ್ಯತೆಯ ಮೇಲೆ ಆಲಿಸಲು ಮುಂದಾಗುವ ಪ್ರಕರಣಗಳಲ್ಲ ಎಂದು ಸಿಜೆಐ ಎನ್‌ ವಿ ರಮಣ ಅವರು ಗುರುವಾರ ಹೇಳಿದ್ದಾರೆ.

ಚುನಾವಣಾ ಪ್ರಕರಣವೊಂದನ್ನು ತುರ್ತಾಗಿ ಆಲಿಸುವಂತೆ ಕೋರಿ ವಕೀಲರೊಬ್ಬರು ಸಿಜೆಐ ಅವರ ಪೀಠದ ಮುಂದೆ ಉಲ್ಲೇಖಿಸಿದ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಚುನಾವಣಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ತುರ್ತು ಇಲ್ಲ" ಎಂದು ಸಿಜೆಐ ಹೇಳಿದರು.

ವಿವಿಧ ರಾಜ್ಯಗಳಲ್ಲಿ ಚುನಾವಣೆಯು ಹೊಸ್ತಿಲಲ್ಲಿರುವಾಗ ಪ್ರತಿಸ್ಪರ್ಧಿಗಳ ವಿರುದ್ಧ ಅನೇಕ ಕ್ರಿಮಿನಲ್‌ ಆರೋಪಗಳನ್ನು ಮರುಕಳಿಸುವುದು ನಡೆಯುತ್ತದೆ ಎಂದು ಅವರು ಹೇಳಿದ್ದರು. ಇದಕ್ಕೂ ಮೊದಲು ಸೋಮವಾರದಂದ ಸಿಜೆಐ ಅವರು ಸುಪ್ರೀಂ ಕೋರ್ಟ್‌ಅನ್ನು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸುವ ನ್ಯಾಯಾಲಯವನ್ನಾಗಿ ಪರಿವರ್ತಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Related Stories

No stories found.
Kannada Bar & Bench
kannada.barandbench.com