[ಚುನಾವಣಾ ಬಾಂಡ್ ದೇಣಿಗೆ] ದಾನಿಗಳ ಖಾಸಗಿತನ, ರಾಜಕೀಯ ಸಂಬಂಧ ರಕ್ಷಿಸಲೆಂದು ಅನಾಮಧೇಯತೆ: ಸುಪ್ರೀಂಗೆ ಎಸ್‌ಜಿ ಸಮಜಾಯಿಷಿ

ಪಾರದರ್ಶಕತೆಯ ಅಗತ್ಯತೆ ಮತ್ತು ದಾನಿಗಳ ಗೌಪ್ಯತೆ ಕಾಪಾಡುವ ಅಗತ್ಯವನ್ನು ಸಮತೋಲನಗೊಳಿಸುವ ಗುರಿ ಈ ಯೋಜನೆಯದ್ದು ಎಂದು ಎಸ್ ಜಿ ಮೆಹ್ತಾ ತಮ್ಮ ಲಿಖಿತ ಹೇಳಿಕೆಯಲ್ಲಿ ವಿವರಿಸಿದ್ದಾರೆ.
Solicitor General Tushar Mehta and Supreme Court
Solicitor General Tushar Mehta and Supreme Court

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಖಾಸಗಿತನ ಮತ್ತು ರಾಜಕೀಯ ಸಂಬಂಧವನ್ನು ರಕ್ಷಿಸಲು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡುವವರ ಹೆಸರನ್ನು ಅನಾಮಧೇಯವಾಗಿ ಇರಿಸಲಾಗುತ್ತದೆ ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಕಾನೂನು ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಲಿಖಿತವಾಗಿ ವಾದ ಸಲ್ಲಿಸಿದ ಎಸ್‌ಜಿ ಮೆಹ್ತಾ ಅವರು ಪಾರದರ್ಶಕತೆಯ ಅಗತ್ಯತೆ ಮತ್ತು ದಾನಿಗಳ ಗೌಪ್ಯತೆ ಕಾಪಾಡುವ ಅಗತ್ಯವನ್ನು ಸಮತೋಲನಗೊಳಿಸುವ ಗುರಿ ಈ ಯೋಜನೆಯದ್ದು ಎಂದು ಒತ್ತಿ ಹೇಳಿದ್ದಾರೆ.

 ವಾದದ ಪ್ರಮುಖಾಂಶಗಳು

  • ಬೇರೆ ರಾಜಕೀಯ ಪಕ್ಷಗಳು ಸಂಭಾವ್ಯ ಗುರಿಯಾಗಿಸಿಕೊಳ್ಳಬಹುದು ಅಥವಾ ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಭಯದಿಂದಾಗಿ ದಾನಿಗಳು ರಾಜಕೀಯ ದೇಣಿಗೆಗಾಗಿ ಲೆಕ್ಕಕ್ಕೆ ಸಿಗದ ಹಣ ಬಳಸುತ್ತಾರೆ.

  • ದಾನಿಗಳು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಒತ್ತಾಯಿಸಿದ್ದರಿಂದಾಗಿ ಈ ಹಿಂದಿನ ಸರ್ಕಾರಗಳು ತೆರಿಗೆ ವಿನಾಯಿತಿ ಮತ್ತು ಚುನಾವಣಾ ಟ್ರಸ್ಟ್‌ ರೀತಿಯ ರಾಜಕೀಯ ದೇಣಿಗೆಗಳ ಮೂಲಕ ಲೆಕ್ಕಕ್ಕೆ ಸಿಗದ ನಗದು ಬಳಕೆಗೆ ಅನುವು ಮಾಡಲು ಇರಿಸಿದ ಹೆಜ್ಜೆಗಳು ವಿಫಲವಾಗಿವೆ.

  •  ಚುನಾವಣಾ ಬಾಂಡ್‌ ಪ್ರಜೆಗಳ ಗೌಪ್ಯತೆ ಕಾಪಾಡುವ ರಾಜ್ಯದ ಸಕಾರಾತ್ಮಕ ಬಾಧ್ಯತೆಯ ಮುಂದುವರಿಕೆಯಾಗಿದ್ದು ಜನರ ರಾಜಕೀಯ ಸಂಬಂಧ ಭದ್ರಪಡಿಸುವ ಹಕ್ಕು ಸೇರಿದಂತೆ ನಾಗರಿಕರ ಮಾಹಿತಿ ಗೌಪ್ಯತೆಯ ಹಕ್ಕನ್ನು ಒಳಗೊಂಡಿರುತ್ತದೆ.

  •  ದಾನಿಗಳು ತಮ್ಮ ಗೌಪ್ಯತೆ ಉಲ್ಲಂಘನೆಯಾಗುತ್ತಿದ್ದುದಕ್ಕೆ ಪ್ರತಿರೋಧ ಒಡುತ್ತಿದ್ದುದರಿಂದ ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಯೋಜನೆ ರೂಪುಗಂಡಿದ್ದು ದಾನಿಗಳ ಗೌಪ್ಯತೆ ಕಾಪಾಡುತ್ತಲೇ ದೇಣಿಗೆಗಾಗಿ ಶುದ್ಧ ಹಣದ ಬಳಕೆ ವಿನಿಯೋಗಿಸುವಂತೆ ಪ್ರೋತ್ಸಾಹಿಸಲು ಇದನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

  • ಇದು ಅಧಿಕೃತ ಬ್ಯಾಂಕ್‌ ಮುಖೇನ ಹಣ ಬಳಸಲು ದಾನಿಗಳನ್ನು ಉತ್ತೇಜಿಸುತ್ತದೆ. ಗೌಪ್ಯತೆಯು ಯೋಜನೆಯ ಹೃದಯ ಮತ್ತು ಆತ್ಮವಾಗಿದೆ. ಗೌಪ್ಯತೆಯ ಅಂಶ ತೆಗೆದುಹಾಕಿದರೆ ಯೋಜನೆ ನಿಷ್ಪರಿಣಾಮಕಾರಿಯಾಗುತ್ತದೆ ಮತ್ತು ನಗದು ಆಧಾರಿತ ರಾಜಕೀಯ ಕೊಡುಗೆ ಮತ್ತೆ ಆರಂಭವಾಗುವುದಕ್ಕೆ ಕಾರಣವಾಗಬಹುದು. ಅದರಂತೆ ಅರಿವಿನ ಹಕ್ಕು ಮತ್ತು ಪಾರದರ್ಶಕತೆಯ ಅಗತ್ಯತೆ ಬಗ್ಗೆ ಅರ್ಜಿದಾರರ ಎಲ್ಲಾ ವಾದಗಳನ್ನು ಮೇಲಿನ ದೃಷ್ಟಿಯಿಂದ ಪರಿಶೀಲಿಸುವ ಅಗತ್ಯವಿದೆ.

Related Stories

No stories found.
Kannada Bar & Bench
kannada.barandbench.com