ಹುದ್ದೆಯ ಸಮೀಕರಣ, ವೇತನ ಶ್ರೇಣಿ ಕಾರ್ಯಾಂಗದ ನಿರ್ಧಾರ, ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ: ಸುಪ್ರೀಂಕೋರ್ಟ್

ಸಂವಿಧಾನದ 227ನೇ ವಿಧಿ ಅಡಿ ಒದಗಿಸಲಾದ ಅಧಿಕಾರವನ್ನು ಮಿತವಾಗಿ ಮತ್ತು ಸೂಕ್ತ ಸಂದರ್ಭಗಳಲ್ಲಿ ಮಾತ್ರ ಬಳಸಲು ಉದ್ದೇಶಿಸಲಾಗಿದ್ದು ಕೇವಲ ದೋಷಗಳನ್ನು ಸರಿಪಡಿಸಲು ಅಲ್ಲ ಎಂದು ಸುಪ್ರೀಂಕೋರ್ಟ್‌ ವಿಭಾಗೀಯ ಪೀಠ ತಿಳಿಸಿದೆ.
Supreme Court

Supreme Court

Published on

ಹುದ್ದೆಗಳ ಸಮೀಕರಣ ಮತ್ತು ವೇತನ ಶ್ರೇಣಿಗಳನ್ನು ನಿರ್ಧರಿಸುವುದು ಕಾರ್ಯಾಂಗದ ಕೆಲಸ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪುನರುಚ್ಚರಿಸಿದ್ದು ನ್ಯಾಯಾಂಗವು ಸಾಮಾನ್ಯವಾಗಿ ಪರಿಣತ ಸಂಸ್ಥೆಗಳು ಮಾಡಬೇಕಾದ ಉದ್ಯೋಗ ಮೌಲ್ಯಮಾಪನ ಕಾರ್ಯಕ್ಕೆ ಕೈ ಹಾಕಬಾರದು ಎಂದಿದೆ. [ಮಧ್ಯಪ್ರದೇಶ ಸರ್ಕಾರ ಮತ್ತು ಆರ್‌ಡಿ ಶರ್ಮಾ ಇನ್ನಿತರರ ನಡುವಣ ಪ್ರಕರಣ].

ವಿವಿಧ ಅಂಶಗಳನ್ನು ಒಳಗೊಂಡ ಅಂತಹ ಕಾರ್ಯ ಕೈಗೆತ್ತಿಕೊಳ್ಳುವುದು ನ್ಯಾಯಾಲಯಗಳಿಗೆ ಕಷ್ಟಕರ. ಸಂವಿಧಾನದ 227ನೇ ವಿಧಿ ಅಡಿ ಒದಗಿಸಲಾದ ಅಧಿಕಾರವನ್ನು ಮಿತವಾಗಿ ಮತ್ತು ಸೂಕ್ತ ಸಂದರ್ಭಗಳಲ್ಲಿ ಮಾತ್ರ ಬಳಸಲು ಉದ್ದೇಶಿಸಲಾಗಿದ್ದು ಕೇವಲ ದೋಷಗಳನ್ನು ಸರಿಪಡಿಸಲು ಅಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

“ಹುದ್ದೆಗಳ ಸಮೀಕರಣ ಮತ್ತು ವೇತನ ಶ್ರೇಣಿ ನಿರ್ಧರಿಸುವುದು ಕಾರ್ಯಾಂಗದ ಪ್ರಾಥಮಿಕ ಕೆಲಸವೇ ವಿನಾ ನ್ಯಾಯಾಂಗದ್ದಲ್ಲ. ಆದ್ದರಿಂದ ಸಾಮಾನ್ಯವಾಗಿ ವೇತನ ಆಯೋಗಗಳಂತಹ ಪರಿಣಿತ ಸಂಸ್ಥೆಗಳು ಮಾಡಬೇಕಾದ ಉದ್ಯೋಗ ಮೌಲ್ಯಮಾಪನದಂತಹ ಕೆಲಸಗಳಿಗೆ ನ್ಯಾಯಾಲಯಗಳು ಕೈಹಾಕುವುದಿಲ್ಲ” ಎಂದು ನ್ಯಾಯಾಲಯ ತಿಳಿಸಿತು.

Also Read
ಉತ್ತರಪ್ರದೇಶ ಪೊಲೀಸರೇ ನನ್ನ ಬಳಿ ಬರಲಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಟ್ವಿಟರ್ ಇಂಡಿಯಾ ಉದ್ಯೋಗಿ ಮನೀಶ್ ಪರ ವಾದ

ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್‌) ಅಡಿಯಲ್ಲಿ ಇತರ ಅಧಿಕಾರಿಗಳಿಗೆ ನೀಡುವಂತೆ ನಿವೃತ್ತ ಉದ್ಯೋಗಿಯೊಬ್ಬರಿಗೆ ₹ 40,000 ಪಿಂಚಣಿ ಲಾಭ ದೊರೆಯಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಸಂಬಂಧಪಟ್ಟ ಮಾಹಿತಿ ಮತ್ತು ವಿವಿಧ ಗುಂಪುಗಳಿಗೆ ಸೇರಿದ ಉದ್ಯೋಗಿಗಳ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡುಯವಂತಹ ವಿವಿಧ ಅಂಶಗಳನ್ನು ಉದ್ಯೋಗ ಮೌಲ್ಯಮಾಪನ ಪ್ರಕ್ರಿಯೆ ಒಳಗೊಂಡಿರುತ್ತದೆ. ಅಂತಹ ಮೌಲ್ಯಮಾಪನ ಹಣ ವ್ಯಯದ ಪರಿಣಾಮವನ್ನು ಮಾತ್ರ ಒಳಗೊಂಡಿರದೆ ಕಷ್ಟಕರವೂ ಸಮ ಮಾತ್ರವಲ್ಲದೆ ಅಲ್ಲದೆ ಕಷ್ಟಕರವಾಗಿರುತ್ತದೆ ಮತ್ತೆ ಸಮಯ ಬೇಡುವಂಥದ್ದೂ ಆಗಿರುತ್ತದೆ. ಆದ್ದರಿಂದ, ಹುದ್ದೆಯ ಸಮೀಕರಣ ಮತ್ತು ವೇತನ ಶ್ರೇಣಿಗಳನ್ನು ನಿರ್ಧರಿಸುವ ಕೆಲಸವನ್ನು ಪರಿಣಿತ ಸಂಸ್ಥೆಗೆ ಬಿಡುವುದು ಉತ್ತಮವಾಗಿದ್ದು ಇದು ಸದಾ ಹೆಚ್ಚು ವಿವೇಕಯುತ ಕೆಲಸ ಎಂದ ನ್ಯಾಯಾಲಯ ಕಡೆಗೆ ಸರ್ಕಾರದ ವಾದವನ್ನು ಪುರಸ್ಕರಿಸಿತು.

Kannada Bar & Bench
kannada.barandbench.com