ತಡೀಪಾರು ಆದೇಶವು ಮುಕ್ತವಾಗಿ ಸಂಚರಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದ ಸುಪ್ರೀಂ: ಮಿತ ಬಳಕೆಗೆ ಸೂಚನೆ

ಸಂವಿಧಾನದ 19 (1) (ಡಿ) ಅಡಿ ಒದಗಿಸಲಾದ ಭಾರತದೆಲ್ಲೆಡೆ ಮುಕ್ತವಾಗಿ ಸಂಚರಿಸುವ ಮೂಲಭೂತ ಹಕ್ಕನ್ನು ಸ್ಥಳ ಪ್ರವೇಶ ನಿರ್ಬಂಧಿಸುವ ಆದೇಶ ಉಲ್ಲಂಘಿಸುವುದರಿಂದ ಅದು ಯುಕ್ತಾಯುಕ್ತತೆಯ ಪರೀಕ್ಷೆ ಎದುರಿಸಬೇಕು ಎಂದು ನ್ಯಾಯಲಯ ಹೇಳಿದೆ.
Supreme Court

Supreme Court

ಆರೋಪಿಗಳು ಒಂದು ನಿರ್ದಿಷ್ಟ ಸ್ಥಳಕ್ಕೆ ಪ್ರವೇಶಿಸಿದಂತೆ ತಡೆಯುವ ತಡೀಪಾರು ಆದೇಶವು ಸಂವಿಧಾನದ 19 (1) (ಡಿ) ಒದಗಿಸಲಾದ ಭಾರತದೆಲ್ಲೆಡೆ ಮುಕ್ತವಾಗಿ ಸಂಚರಿಸುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಆದೇಶವನ್ನು ಮಿತವಾಗಿ ಬಳಸಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತಿಳಿಸಿದೆ [ದೀಪಕ್‌ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಮಹಾರಾಷ್ಟ್ರ ಪೋಲೀಸ್ ಕಾಯಿದೆಯಡಿಯಲ್ಲಿ ಆರೋಪಿ ದೀಪಕ್‌ ವಿರುದ್ಧ ಜಾರಿಗೊಳಿಸಲಾದ ಸ್ಥಳ ಪ್ರವೇಶ ನಿರ್ಬಂಧ ಆದೇಶವನ್ನು ಬಾಂಬೆ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ದೀಪಕ್‌ ಮೇಲ್ಮನವಿ ಸಲ್ಲಿಸಿದ್ದರು. ಪ್ರವೇಶ ನಿರ್ಬಂಧ ಆದೇಶವು ಹಳೆಯ ಅಪರಾಧಗಳು ಮತ್ತು ಎರಡು ಗೌಪ್ಯ ಸಾಕ್ಷಿ ಸಾಕ್ಷ್ಯಗಳನ್ನು ಆಧರಿಸಿ ಹೊರಡಿಸಲಾಗಿತ್ತು.

ಸಂವಿಧಾನದ 19 (1) (ಡಿ) ಒದಗಿಸಲಾದ ಭಾರತದೆಲ್ಲೆಡೆ ಮುಕ್ತವಾಗಿ ಸಂಚರಿಸುವ ಮೂಲಭೂತ ಹಕ್ಕನ್ನು ಸ್ಥಳ ಪ್ರವೇಶ ನಿರ್ಬಂಧಿಸುವ ಆದೇಶ ಉಲ್ಲಂಘಿಸುವುದರಿಂದ ಅದು ಯುಕ್ತಾಯುಕ್ತತೆಯ ಪರೀಕ್ಷೆಯನ್ನು ಎದುರಿಸಿ ನಿಲ್ಲಬೇಕು ಎಂದು ನ್ಯಾಯಲಯ ಹೇಳಿದೆ.

ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಚಿಂತನೆ ನಡೆಸಬೇಕು ಎಂದ ನ್ಯಾಯಮೂರ್ತಿಗಳಾದ ಅಜಯ್‌ ರಾಸ್ತೋಗಿ ಮತ್ತು ಅಭಯ್‌ ಎಸ್‌ ಓಕಾ ಅವರಿದ್ದ ಪೀಠ ಪ್ರಸ್ತುತ ಪ್ರಕರಣದಲ್ಲಿ ಆಕಸ್ಮಿಕವಾಗಿ ಹೈಕೋರ್ಟ್‌ ಆದೇಶ ಜಾರಿಗೊಳಿಸಿದ್ದು ಅದನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿಸಿತು.

Related Stories

No stories found.
Kannada Bar & Bench
kannada.barandbench.com