ಶರದ್ ಪವಾರ್ ವಿರುದ್ಧ ಫೇಸ್‌ಬುಕ್‌ ಪೋಸ್ಟ್: ಮೇ 18ರವರೆಗೆ ನಟಿ ಕೇತಕಿ ಚಿತಳೆ ಪೊಲೀಸ್ ವಶಕ್ಕೆ

ಎನ್ಸಿಪಿ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕಾಗಿ ಮರಾಠಿ ನಟಿಯನ್ನು ಮೇ 14 ರಂದು ಥಾಣೆ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.
ಶರದ್ ಪವಾರ್ ವಿರುದ್ಧ ಫೇಸ್‌ಬುಕ್‌ ಪೋಸ್ಟ್: ಮೇ 18ರವರೆಗೆ ನಟಿ ಕೇತಕಿ ಚಿತಳೆ ಪೊಲೀಸ್ ವಶಕ್ಕೆ

ರಾಜ್ಯಸಭಾ ಸದಸ್ಯ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ವಿರುದ್ಧ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ಮರಾಠಿ ನಟಿ ಕೇತಕಿ ಚಿತಾಲೆ ಅವರನ್ನು ಮೇ 18 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿ ಥಾಣೆ ನ್ಯಾಯಾಲಯ ಭಾನುವಾರ ಆದೇಶಿಸಿದೆ.

ಪವಾರ್ ಅವರ ಅನಾರೋಗ್ಯ, ನೋಟ, ಧ್ವನಿಯ ಬಗ್ಗೆ 29 ವರ್ಷದ ನಟಿ ಅವಹೇಳನಕಾರಿ ಟೀಕೆ ಮಾಡಿದ್ದರು ಅಲ್ಲದೆ ಅವರನ್ನು ಭ್ರಷ್ಟ ಎಂದು ಕೂಡ ಜರೆದಿದ್ದರು. ಶನಿವಾರ (ಮೇ 14) ಥಾಣೆ ಅಪರಾಧ ವಿಭಾಗದ ಪೊಲೀಸರು ಆಕೆಯನ್ನು ಬಂಧಿಸಿದ್ದರು.

Also Read
ಸಂವಿಧಾನದ ವ್ಯಾಪ್ತಿಯಲ್ಲಿನ ಭಾಷಣ ದೇಶದ್ರೋಹವಲ್ಲ: ಭೀಮಾ ಕೋರೆಗಾಂವ್‌ ಆಯೋಗದ ಮುಂದೆ ಶರದ್‌ ಪವಾರ್‌ ಸಾಕ್ಷ್ಯ ದಾಖಲು

ಐಪಿಸಿ ಸೆಕ್ಷನ್‌ 500 (ಮಾನನಷ್ಟ), ), 501 (ಮಾನಹಾನಿಕರ ವಿಷಯವನ್ನು ಮುದ್ರಣ ಅಥವಾ ಕೆತ್ತನೆ), 153ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಆಧರಿಸಿ ದ್ವೇಷ ಪ್ರಚೋದನೆ, ಸಾಮರಸ್ಯಕ್ಕೆ ಧಕ್ಕೆ) ಅಡಿ ನಟಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇಂದು ಆಕೆಯನ್ನು ಥಾಣೆಯಲ್ಲಿನ ರಜೆಕಾಲೀನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಟಿಯನ್ನು ಮೇ 18 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಪವಾರ್‌ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಂಧನಕ್ಕೊಳಗಾದ ಎರಡನೇ ವ್ಯಕ್ತಿ ಚಿತಳೆ. ನಿಂದನಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮಾಜಿ ಕಾರ್ಯಕರ್ತ ಹಾಗೂ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಈ ಎರಡೂ ಹೇಳಿಕೆಗಳು ಮಹಾರಾಷ್ಟ್ರದ ಎನ್‌ಸಿಪಿ ಕಾರ್ಯಕರ್ತರಲ್ಲಿ ಭಾರಿ ಆಕ್ರೋಶ ಸೃಷ್ಟಿಸಿವೆ.

Related Stories

No stories found.
Kannada Bar & Bench
kannada.barandbench.com