[ಚುಟುಕು] ತನಿಖೆಗಾಗಿ ಆಧಾರ್ ಮಾಹಿತಿ ನೀಡಿ: ಯುಐಡಿಎಐಗೆ ದೆಹಲಿ ಹೈಕೋರ್ಟ್‌ ಸೂಚನೆ

Aadhaar cards, Delhi High Court

Aadhaar cards, Delhi High Court

ಪೌರ ರಕ್ಷಣೆಯ ತರಬೇತಿಗಾಗಿ 450 ಜನರಿಗೆ ನಕಲಿ ಆಧಾರ್‌ ಕಾರ್ಡ್‌ಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅಗತ್ಯವಾದ ಮಾಹಿತಿಯನ್ನು ತನಿಖಾ ಸಂಸ್ಥೆಗೆ ಒದಗಿಸುವಂತೆ ಭಾರತೀಯ ವಿಶೇಷ ಗುರುತು ಪ್ರಾಧಿಕಾರಕ್ಕೆ ದೆಹಲಿ ಹೈಕೋರ್ಟ್‌ ಸೂಚಿಸಿದೆ. ರಾಜಸ್ಥಾನಕ್ಕೆ ಸೇರಿದ 450 ಅಭ್ಯರ್ಥಿಗಳಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ನಕಲಿ ಆಧಾರ್‌ ಕಾರ್ಡ್‌ಗಳು ಲಭ್ಯವಾಗುವಂತೆ ಮಾಡಿರುವ ಪ್ರಕರಣ ಇದಾಗಿದೆ. ಇವರೆಲ್ಲರೂ ಪೌರ ರಕ್ಷಣಾ ತರಬೇತಿಗಾಗಿ ದೆಹಲಿಯ ವಿಳಾಸ ನೀಡಿ ನೊಂದಾಯಿಸಿಕೊಂಡಿದ್ದರು. ದೆಹಲಿ ಸಾರಿಗೆ ಸೇವೆಗೆ ಅಗತ್ಯವಿದ್ದ ಮಾರ್ಷಲ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಅಕ್ರಮ ನಡೆದಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್ ಗಮನಿಸಿ.

Related Stories

No stories found.
Kannada Bar & Bench
kannada.barandbench.com