ಕೃಷಿ ಮಸೂದೆಗೆ ರಾಷ್ಟ್ರಪತಿ ಸಹಿ- ರೈತರ ಕಾಯಿದೆ ಜಾರಿಗೆ

ಕೃಷಿ ಕ್ಷೇತ್ರದಲ್ಲಿ ಪರ ವಿರೋಧದ ದೊಡ್ಡ ಕೋಲಾಹಲವನ್ನೆ ಸೃಷ್ಟಿಸಿರುವ ಕೃಷಿ ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದ ಬೆನ್ನಿಗೇ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಆ ಮೂಲಕ ಮೂರು ಕೃಷಿ ಕಾಯಿದೆಗಳು ಜಾರಿಗೆ ಬಂದಿವೆ.
ರೈತರು ಬೆಳೆದ ಬೆಳೆ
ರೈತರು ಬೆಳೆದ ಬೆಳೆ

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ಅಂಕಿತ ಹಾಕಿದ ಮೂರು ಕೃಷಿ ಕಾಯಿದೆಗಳ ವಿವರ ಹೀಗಿದೆ:

  1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ, 2020.

  2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯಿದೆ, 2020.

  3. ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020

ಅಕಾಲಿದಳ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಈ ಕಾಯಿದೆಗಳನ್ನು ವಿರೋಧಿಸಿವೆ. ಇದೇ ಕಾರಣಕ್ಕೆ ಕೆಲ ರಾಜಕೀಯ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿವೆ. ಅಕಾಲಿ ದಳ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಕೃಷಿ ಮಸೂದೆಗಳನ್ನು ವಿರೋಧಿಸಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ರಾಷ್ಟ್ರಪತಿಗಳ ಅಂಕಿತದೊಂದಿಗೆ ಮಸೂದೆಗಳು ಕಾಯಿದೆಗಳಾಗಿ ಮಾರ್ಪಟ್ಟಿವೆ.

ಕೃಷಿ ಕ್ಷೇತ್ರದ ಮೇಲೆ ಅಗಾಧವಾದ ಪರಿಣಾಮ ಬೀರಲಿರುವ ಈ ಮೂರು ಕಾಯಿದೆಗಳನ್ನು ವಿವರವಾಗಿ ಅಭ್ಯಸಿಸಲು ಈ ಕೆಳಗಿನ ಲಿಂಕ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು:

Attachment
PDF
Farmers__Produce_Trade___Commerce__Promotion___Facilitation__Act__2020_1.pdf
Preview
Attachment
PDF
Farmers__Empowerment___Protection__Agreement_on_Price_Assurance___Farm_Services_Act__2020_2.pdf
Preview
Attachment
PDF
Essential_Commodities_3.pdf
Preview

Related Stories

No stories found.
Kannada Bar & Bench
kannada.barandbench.com