ಚಿತ್ರಸಾಹಿತಿ ಜಾವೇದ್ ಅಖ್ತರ್ ವಿರುದ್ಧ ನಟಿ ಕಂಗನಾ ತನ್ನ ಕ್ರಿಮಿನಲ್ ದೂರಿನಲ್ಲಿ ಮಾಡಿರುವ ಪ್ರಮುಖ ಐದು ಆರೋಪಗಳಿವು...

ತನ್ನ ಖಾಸಗಿತನಕ್ಕೆ ಧಕ್ಕೆ ತರುವ ಮೂಲಕ ಕ್ರಿಮಿನಲ್ ಪಿತೂರಿ, ಸುಲಿಗೆ ಮತ್ತು ಘನತೆಗೆ ಚ್ಯುತಿ ತಂದ ಆರೋಪಗಳನ್ನು ಕಂಗನಾ ಅವರು ಅಖ್ತರ್ ವಿರುದ್ಧ ಮಾಡಿದ್ದು ಮುಂಬೈ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ಚಿತ್ರಸಾಹಿತಿ ಜಾವೇದ್ ಅಖ್ತರ್ ವಿರುದ್ಧ ನಟಿ ಕಂಗನಾ ತನ್ನ ಕ್ರಿಮಿನಲ್ ದೂರಿನಲ್ಲಿ ಮಾಡಿರುವ ಪ್ರಮುಖ ಐದು ಆರೋಪಗಳಿವು...

ಕ್ರಿಮಿನಲ್‌ ಪಿತೂರಿ, ಸುಲಿಗೆ ಹಾಗೂ ಘನತೆಗೆ ಧಕ್ಕೆ ತರುವ ಮೂಲಕ ತಮ್ಮ ಖಾಸಗಿತನಕ್ಕೆ ಹಾನಿ ಉಂಟು ಮಾಡಿದ್ದಾರೆ ಎಂದು ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ಚಿತ್ರಸಾಹಿತಿ ಜಾವೇದ್‌ ಅಖ್ತರ್‌ ವಿರುದ್ಧ ಮುಂಬೈನ ನ್ಯಾಯಾಲಯವೊಂದರಲ್ಲಿ ಕ್ರಿಮಿನಲ್‌ ದೂರು ದಾಖಲಿಸಿದ್ದಾರೆ.

ತಮ್ಮ ವಿರುದ್ಧ ಗಂಭೀರ ಅಪರಾಧಗಳನ್ನು ಎಸಗಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದು ಅದರ ವಿವರಗಳು ಹೀಗಿವೆ:

  1. ಸಹನಟನ ಜೊತಗಿನ ವಿವಾದವೊಂದಕ್ಕೆ ಸಂಬಂಧಿಸಿದಂತೆ ಅಖ್ತರ್‌ ಅವರು ತನ್ನನ್ನು ಹಾಗೂ ತನ್ನ ಸಹೋದರಿ ರಂಗೋಲಿ ಚಂಡೇಲ್‌ ಅವರನ್ನು ಮನೆಗೆ ಕರೆಸಿಕೊಂಡು ಕ್ರಿಮಿನಲ್‌ ಬೆದರಿಕೆ ಒಡ್ಡಿದರು.

  2. ಸಹನಟನಿಗೆ ಅನುಕೂಲಕರವಾಗುವಂತೆ ಹೇಳಿಕೆ ನೀಡಬೇಕು; ಸಹನಟನಿಗೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ, ತಮ್ಮ ಸಾರ್ವಜನಿಕ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಬೆದರಿಕೆಯೊಡ್ಡಿದರು.

  3. ಒಂದು ವೇಳೆ ಕ್ಷಮೆ ಯಾಚಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೆದರಿಸಿದರು.

  4. ವಿನಾಕಾರಣ ತಮ್ಮ ವಿರುದ್ಧ ಶೀಲರಾಹಿತ್ಯದ ಅನಗತ್ಯ ಆರೋಪಗಳನ್ನು ಮಾಡುತ್ತಾ ತಮ್ಮ ನೈತಿಕ ವ್ಯಕ್ತಿತ್ವದ ಮೇಲೆ ಅಖ್ತರ್‌ ದಾಳಿ ನಡೆಸಿದರು. ತಮ್ಮ ಘನತೆಗೆ ಅಪಮಾನ ಮಾಡಿ ಖಾಸಗಿತನಕ್ಕೆ ಧಕ್ಕೆ ತಂದರು.

  5. ಅಖ್ತರ್‌ ಎಸಗಿರುವ ಗಂಭೀರ ಸಂಜ್ಞೇಯ ಅಪರಾಧಗಳು ತನಗೆ ಅಪಾರ ಮಾನಸಿಕ ಹಿಂಸೆ ಮತ್ತು ಆಘಾತ ಉಂಟು ಮಾಡಿವೆ.

ರಿಪಬ್ಲಿಕ್‌ ಟಿವಿಯಲ್ಲಿ ತಮ್ಮ ವಿರುದ್ಧ ನೀಡಿದ ಹೇಳಿಕೆಗಳಿಂದಾಗಿ ತಮಗೆ ಮಾನನಷ್ಟ ಉಂಟಾಗಿದೆ ಎಂದು ಈ ಹಿಂದೆ ಜಾವೇದ್‌ ಅಖ್ತರ್‌ ಅವರು ದೂರು ದಾಖಲಿಸಿದ್ದರು. ಆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಕಂಗನಾ ಅವರು ಅಖ್ತರ್‌ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

Kannada Bar & Bench
kannada.barandbench.com