ಅಲಾಹಾಬಾದ್ ಹೈಕೋರ್ಟ್ ನಿವೃತ್ತನ್ಯಾಯಮೂರ್ತಿ ವಿಮಲೇಶ್ ಕುಮಾರ್ ಶುಕ್ಲಾ ಇನ್ನಿಲ್ಲ

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಿದ ಬಳಿಕ, ನ್ಯಾ. ಶುಕ್ಲಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು.
Justice Vimlesh Kumar Shukla
Justice Vimlesh Kumar Shukla

ಹಿರಿಯ ವಕೀಲ ಮತ್ತು ಅಲಾಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿಮಲೇಶ್ ಕುಮಾರ್ ಶುಕ್ಲಾ ಅವರು ಜೂನ್ 29ರ ಶನಿವಾರ ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು.

ನ್ಯಾಯಮೂರ್ತಿ ಶುಕ್ಲಾ ಅವರು 1981ರಲ್ಲಿ ಉತ್ತರ ಪ್ರದೇಶ ವಕೀಲರ ಪರಿಷತ್‌ನಲ್ಲಿ ನ್ಯಾಯವಾದಿಯಾಗಿ ನೋಂದಾಯಿಸಿಕೊಂಡಿದ್ದರು. ನಂತರ ಅಲಾಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಸಿವಿಲ್‌ ಮತ್ತು ಸಾಂವಿಧಾನಿಕ ಕಾನೂನಿಗೆ ಸಂಬಂಧಿಸಿದಂತೆ ಅವರು ವಕೀಲಿಕೆಯಲ್ಲಿ ತೊಡಗಿದ್ದರು.

Also Read
ಖ್ಯಾತ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ನಿಧನ

ಅವರು 2002ರಿಂದ 2017ರವರೆಗೆಅಲಹಾಬಾದ್ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅವರು ಸೇವೆ ಸಲ್ಲಿಸಿದ್ದರು. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ 2016ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಿದ ಬಳಿಕ, ನ್ಯಾ. ಶುಕ್ಲಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು.

Kannada Bar & Bench
kannada.barandbench.com