ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಮಾಜಿ ಬಿಷಪ್‌ ಫ್ರಾಂಕೊ ಮುಲಕ್ಕಲ್‌ ಅವರನ್ನು ಖುಲಾಸೆಗೊಳಿಸಿದ ಕೇರಳ ನ್ಯಾಯಾಲಯ

ಬಿಷಪ್‌ ಮುಲಕ್ಕಲ್‌ ಅವರು 2014 ಮತ್ತು 2016ರ ಅವಧಿಯಲ್ಲಿ ತಮ್ಮ ಮೇಲೆ 13 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಕೊಟ್ಟಾಯಂ ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ 2018ರ ಜೂನ್‌ನಲ್ಲಿ ಕ್ರೈಸ್ತ ಸನ್ಯಾಸಿನಿ ದೂರು ನೀಡಿದ್ದರು.
Bishop Franco

Bishop Franco

Bishop Franco

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಎದುರಿಸುತ್ತಿದ್ದ ಪಂಜಾಬ್‌ನ ಜಲಂಧರ್‌ ಪ್ರಾಂತ್ಯದ ಮಾಜಿ ಕ್ಯಾಥೊಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಕೇರಳದ ನ್ಯಾಯಾಲಯವು ಶುಕ್ರವಾರ ಖುಲಾಸೆಗೊಳಿಸಿದೆ.

ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದ ಪ್ರಕರಣದ ತೀರ್ಪನ್ನು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಜಿ ಗೋಪಕುಮಾರ್‌ ಕೊಟ್ಟಾಯಂ ಅವರು ಪ್ರಕಟಿಸಿದರು.

2018ರಲ್ಲಿ ಅತ್ಯಾಚಾರ ಆರೋಪ ಮಾಡಿದ್ದ 50 ವರ್ಷದ ಕ್ರೈಸ್ತ ಸನ್ಯಾಸಿನಿಯು ಕೇರಳದಲ್ಲಷ್ಟೇ ಅಲ್ಲ ದೇಶದ ಕ್ಯಾಥೊಲಿಕ್‌ ಪಂಥ ಅನುಸರಿಸುವ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದರು. ಮೊದಲಿಗೆ ಚರ್ಚ್‌ನಲ್ಲಿ ಪೋಪ್‌ ಅವರ ಕಚೇರಿ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಿ ಆಗ ಹಿರಿಯ ಪಾದ್ರಿಯಾಗಿದ್ದ ಮುಲಕ್ಕಲ್‌ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸನ್ಯಾಸಿನಿಯು ಆರೋಪಿಸಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ ಎನ್ನಲಾಗಿದೆ.

Also Read
ಕೋವಿಡ್ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ಬಿಷಪ್ ಮುಲಕ್ಕಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

2018ರ ಜೂನ್‌ನಲ್ಲಿ ಪಂಜಾಬ್‌ನ ಜಲಂಧರ್‌ ಪ್ರಾಂತ್ಯದ ಮುಖಸ್ಥರಾಗಿದ್ದ ಮುಲಕ್ಕಲ್‌ ವಿರುದ್ಧ ಕ್ರೈಸ್ತ ಸನ್ಯಾಸಿನಿಯು ಕೊಟ್ಟಾಯಂ ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ದೂರಿ ನೀಡಿದ್ದರು. ದೂರಿನಲ್ಲಿ ಮುಲಕ್ಕಲ್‌ ಅವರು 2014 ಮತ್ತು 2016ರ ಅವಧಿಯಲ್ಲಿ 13 ಬಾರಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡವು ಮುಲಕ್ಕಲ್‌ ಅವರನ್ನು ಬಂಧಿಸಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 342 (ಅಕ್ರಮವಾಗಿ ಬಂಧನ), 376 (2)(ಕೆ), 376(2)(ಎನ್‌), 376 ಸಿ(ಎ), 377 (ಅಸಹಜ ಅಪರಾಧ) and 506(ii) (ಕ್ರಿಮಿನಲ್‌ ಬೆದರಿಕೆ) ಅಡಿ ಪ್ರಕರಣ ದಾಖಲಿಸಿತ್ತು.

Related Stories

No stories found.
Kannada Bar & Bench
kannada.barandbench.com