Murlidhar Chandrakant Bhandare
Murlidhar Chandrakant Bhandare

ಒಡಿಶಾದ ಮಾಜಿ ರಾಜ್ಯಪಾಲ ಹಾಗೂ ಹಿರಿಯ ವಕೀಲ ಮುರಳೀಧರ್ ಸಿ ಭಂಡಾರೆ ಇನ್ನಿಲ್ಲ

ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದ ಭಂಡಾರೆ ಅವರು ಎರಡು ಅವಧಿಗೆ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರು ಕೂಡ ಆಗಿದ್ದರು.
Published on

ಒಡಿಶಾದ ಮಾಜಿ ರಾಜ್ಯಪಾಲ ಮತ್ತು ಹಿರಿಯ ವಕೀಲ ಮುರಳೀಧರ ಸಿ ಭಂಡಾರೆ ಶನಿವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಡಿಸೆಂಬರ್ 10, 1928ರಲ್ಲಿ ಜನಿಸಿದ ಭಂಡಾರೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಪ್ರಾಕ್ಟೀಸ್‌ ಮಾಡಿದ್ದರು. ಎರಡು ಅವಧಿಗೆ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರು ಕೂಡ ಆಗಿದ್ದರು.

1980 ಮತ್ತು 1994 ರ ನಡುವೆ ಅವರು ಮೂರು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಆಗಸ್ಟ್ 2007ರಲ್ಲಿ, ಒಡಿಶಾದ ರಾಜ್ಯಪಾಲರಾಗಿ ನೇಮಕಗೊಂಡ ಅವರು ಮಾರ್ಚ್ 2013ರವರೆಗೆ ಅಧಿಕಾರದಲ್ಲಿದ್ದರು.

ಇಂದು (ಜೂನ್ 16 ರ ಭಾನುವಾರ) ಸಂಜೆ 5 ಗಂಟೆಗೆ ದೆಹಲಿಯ ಲೋಧಿ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Kannada Bar & Bench
kannada.barandbench.com