
Supreme Court
ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.
ಜನವರಿ 10ರಿಂದ (ಬರುವ ಸೋಮವಾರ) ಪ್ರಕರಣಗಳ ವಿಚಾರಣೆ ವರ್ಚುವಲ್ ವಿಧಾನದ ಮೂಲಕ ನಡೆಯಲಿದ್ದು, ನ್ಯಾಯಮೂರ್ತಿಗಳು ನ್ಯಾಯಾಲಯದ ಬದಲಿಗೆ ತಮ್ಮ ಮನೆಗಳಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದ್ದಾರೆ ಎಂದು ಜನವರಿ 6 ರಂದು ಸುಪ್ರೀಂ ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯವಾಗಿ, ಅತ್ಯಂತ ತುರ್ತು ಉಲ್ಲೇಖದ ಪ್ರಕರಣಗಳು, ಹೊಸ ಪ್ರಕರಣಗಳು, ಜಾಮೀನು ಪ್ರಕರಣಗಳು, ತಡೆಯಾಜ್ಞೆ ಪ್ರಕರಣಗಳು, ಬಂಧನದ ಪ್ರಕರಣಗಳು ಹಾಗೂ ನಿಗದಿತ ದಿನಾಂಕದ ಪ್ರಕರಣಗಳು ಜನವರಿ 10 ರಿಂದ ವಿಚಾರಣೆಗೆ ಬರಲಿವೆ.
ಕೋವಿಡ್ ಉಲ್ಬಣದಿಂದಾಗಿ ಹಲವು ಹೈಕೋರ್ಟ್‌ಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ವಿಧಾನದಲ್ಲಿ ವಿಚಾರಣೆಗೆ ಮುಂದಾಗಿವೆ. ಬಾಂಬೆ, ಉತ್ತರಾಖಂಡ, ಕಲ್ಕತ್ತಾ ಮತ್ತು ಅಲಾಹಾಬಾದ್ ಸೇರಿದಂತೆ ವಿವಿಧ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೂಡ ಕೋವಿಡ್ ದೃಢಪಟ್ಟಿದೆ.