ಶ್ರವಣ ಮತ್ತು ದೃಷ್ಟಿಹೀನರು ಸಿನಿಮಾ ಆನಂದಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ರೂಪಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಆದೇಶ

ನ್ಯಾಯಾಲಯದ ವಿಚಾರಣೆಗೆ ಕೂಡ (ಅಂಗವಿಕಲರೊಂದಿಗೆ ಸಂಕೇತ ಭಾಷೆಗಳ ಮೂಲಕ ಸಂವಹನ ನಡೆಸುವ) ವ್ಯಾಖ್ಯಾನಕಾರರನ್ನು ಬಳಸುವುದನ್ನು ಪರಿಗಣಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪೀಠ ಆದೇಶಿಸಿತು.
Movie Theatre
Movie Theatre

ದೃಶ್ಯ ಮತ್ತು ಶ್ರವಣ ದೋಷ ಇರುವವರು ಕೂಡ ಚಲನಚಿತ್ರಗಳನ್ನು ಸವಿಯಲು ಅನುವಾಗುವಂತೆ ಚಲನಚಿತ್ರ ತಯಾರಕರು, ಬೇಡಿಕೆ ಮೇರೆಗೆ ವೀಡಿಯೊ ಸೇವೆ ಒದಗಿಸುವ ಒಟಿಟಿ ವೇದಿಕೆಗಳು ದೂರದರ್ಶನ ಪ್ರಸಾರಕರು ಹಾಗೂ ಇತರೆ ಭಾಗೀದಾರರೊಂದಿಗೆ ಸಭೆ ನಡೆಸಿ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ.

ಕರಡು ಮಾರ್ಗಸೂಚಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರಿದ್ದ ಪೀಠ ಸೂಚಿಸಿತು.

“ವಿಕಲಚೇತನರ ಹಕ್ಕುಗಳ ಕಾಯಿದೆ, ವಿಕಲಚೇತನರ ಹಕ್ಕುಗಳ ನಿಯಮಾವಳಿ ಹಾಗೂ ಭಾರತ ಸರ್ಕಾರ ಹೊರಡಿಸಿದ ಸುತ್ತೋಲೆಯನ್ನು ಯಾವ ರೀತಿಯಲ್ಲಿ ಜಾರಿಗೊಳಿಸಬೇಕು ಎಂಬುದರ ಕುರಿತು ಸಭೆಯಲ್ಲಿ  ಚರ್ಚೆ ನಡೆಯಬೇಕು. ಸಚಿವಾಲಯವು ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರೂಪಿಸಿ ಅವುಗಳ ಕರಡನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 26ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

Also Read
ನ್ಯಾಯಾಲಯದಲ್ಲಿ ಐಪ್ಯಾಡ್, ಲ್ಯಾಪ್‌ಟಾಪ್‌ ಬಳಸಲು ಅವಕಾಶ ನೀಡಬೇಕು; ಸಿನಿಮಾ ವೀಕ್ಷಿಸದಿದ್ದರೆ ಸಾಕು: ಸಿಜೆಐ

ನ್ಯಾಯಾಲಯದ ವಿಚಾರಣೆಗೆ ಕೂಡ (ಅಂಗವಿಕಲರೊಂದಿಗೆ ಸಂಕೇತ ಭಾಷೆಗಳ ಮೂಲಕ ಸಂವಹನ ನಡೆಸುವ) ವ್ಯಾಖ್ಯಾನಕಾರರನ್ನು ಬಳಸುವುದನ್ನು ಪರಿಗಣಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನ್ಯಾಯಾಲಯ ಆದೇಶಿಸಿತು.

ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿ ವೇದಿಕೆಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು, ಆನಂದಿಸಲು ಅನುವಾಗುವಂತೆ ವಿಶೇಷಚೇತನರ ಹಕ್ಕುಗಳ (ಆರ್‌ಪಿಡಬ್ಲ್ಯೂಡಿ) ಕಾಯಿದೆ ಮತ್ತು ಆರ್‌ಪಿಡಬ್ಲ್ಯೂಡಿ ನಿಯಮಾವಳಿಗಳನ್ನು  ಜಾರಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲರು, ಕಾನೂನು ವಿದ್ಯಾರ್ಥಿಗಳು ಮತ್ತು ಶ್ರವಣ ಮತ್ತು ದೃಷ್ಟಿದೋಷ ಉಳ್ಳವರ ಗುಂಪು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Related Stories

No stories found.
Kannada Bar & Bench
kannada.barandbench.com