ಉತ್ಪಾದಕರು, ಜಾಹೀರಾತುದಾರರು ಏನು ನೀಡುತ್ತಿದ್ದಾರೆ ಎಂಬುದನ್ನು ತಿಳಿಯುವುದನ್ನು ಆರೋಗ್ಯದ ಹಕ್ಕು ಹೊಂದಿದೆ: ಸುಪ್ರೀಂ

ಇನ್ನು ಮುಂದೆ ಜಾಹೀರಾತುದಾರರು ಅಥವಾ ಜಾಹೀರಾತು ಏಜೆನ್ಸಿಗಳು ಅವುಗಳನ್ನು ಮುದ್ರಿಸುವುದಕ್ಕೂ ಮುನ್ನ ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
Supreme Court of India
Supreme Court of India

ಆರೋಗ್ಯದ ಮೂಲಭೂತ ಹಕ್ಕು ಗ್ರಾಹಕರು ಆರೋಗ್ಯದ ಕುರಿತಾದ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳುವುದನ್ನು ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಅದು ಉತ್ಪನ್ನಗಳ ತಯಾರಕರು ಹಾಗೂ ಅದನ್ನು ಪ್ರಚಾರ ಮಾಡುವ ಜಾಹೀರಾತುದಾರರು ಬಾಧ್ಯಸ್ಥರಾಗಬೇಕು ಎಂದು ಹೇಳಿದೆ.

ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ ಮಾರ್ಗಸೂಚಿಗಳ ನೀರಸ ಅನುಷ್ಠಾನದ ಬಗ್ಗೆ ಗಂಭೀರ ದೃಷ್ಟಿ ಬೀರಿರುವ ನ್ಯಾಯಾಲಯವು ಇನ್ನು ಮುಂದೆ, ಜಾಹೀರಾತುದಾರರು ಅಥವಾ ಜಾಹೀರಾತು ಏಜೆನ್ಸಿಯು ಯಾವುದೇ ಜಾಹೀರಾತನ್ನು ಮುದ್ರಿಸುವ ಅಥವಾ ಪ್ರದರ್ಶಿಸುವ ಮೊದಲು ಸ್ವಯಂ-ಘೋಷಣೆ ನಮೂನೆಯನ್ನು ಸಲ್ಲಿಸಬೇಕು ಎಂದಿದೆ. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ಸ್‌ ನಿಯಮಗಳ ಅಡಿಯಲ್ಲಿ ಬರುವ ಜಾಹೀರಾತು ನಿಯಮಗಳಿಗೆ ಅನುಸಾರವಾಗಿ ಜಾಹೀರಾತು ಇದೆ ಎಂದು ಘೋಷಿಸಬೇಕು. ಇದನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯು ಆರಂಭಿಸಿರುವ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಹೇಳಲಾಗಿದೆ.

ಇತ್ತೀಚೆಗೆ ಪತಂಜಲಿ ಹಾದಿ ತಪ್ಪಿದ ಜಾಹೀರಾತು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಮಾಡಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ತಪ್ಪುದಾರಿಗೆಳೆಯುವ ಜಾಹೀರಾತುಗಳಲ್ಲಿ ಉತ್ಪನ್ನಗಳು ಅಥವಾ ಸೇವೆಗಳನ್ನು ಅನುಮೋದಿಸುವುದು ಕಂಡುಬಂದರೆ ಅವರೂ ಸಮಾನ ಜವಾಬ್ದಾರರಾಗಿರುತ್ತಾರೆ ಎಂದು ನ್ಯಾಯಾಲಯ ಎಚ್ಚರಿಸಿದೆ. 

Kannada Bar & Bench
kannada.barandbench.com