ದೆಹಲಿ ಹೈಕೋರ್ಟ್‌ ಅದೇಶದ ವಿರುದ್ಧ ಅಮೆಜಾನ್‌ ಮನವಿಯನ್ನು ಫೆ.8ರಂದು ಆಲಿಸಲಿರುವ ಸುಪ್ರೀಂ ಕೋರ್ಟ್‌ [ಚುಟುಕು]

Supreme Court, Amazon and Future

Supreme Court, Amazon and Future


ಅಮೆಜಾನ್ ಮತ್ತು ಫ್ಯೂಚರ್ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಪೂರ್‌ ಮಧ್ಯಸ್ಥಿಕೆ ನ್ಯಾಯಮಂಡಳಿಯ ಪ್ರಕ್ರಿಯೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಅಮೆರಿಕದ ಟೆಕ್‌ ದೈತ್ಯ ಅಮೆಜಾನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಫೆಬ್ರವರಿ 8ರಂದು ನಡೆಸಲಿದೆ. ಹಿರಿಯ ವಕೀಲ ಗೋಪಾಲ ಸುಬ್ರಮಣಿಯಂ ಅಮೆಜಾನ್‌ ಪರವಾಗಿ ಇಂದು ಪ್ರಕರಣವನ್ನು ಪಟ್ಟಿ ಮಾಡಲು ಕೋರಿ ಸಿಜೆಐ ಎನ್‌ ವಿ ರಮಣ ಅವರ ನೇತೃತ್ವದ ಪೀಠದ ಮುಂದೆ ಉಲ್ಲೇಖಿಸಿದರು. ಆಗ ಸಿಜೆಐ ಅವರು ಪ್ರಕರಣವನ್ನು ಮುಂದಿನ ಮಂಗಳವಾರ ಪಟ್ಟಿ ಮಾಡಲು ಸೂಚಿಸಿದರು.

Related Stories

No stories found.
Kannada Bar & Bench
kannada.barandbench.com