ಯಥಾಸ್ಥಿತಿ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋದ ಫ್ಯೂಚರ್ ರಿಟೇಲ್: ನಾಳೆ ವಿಚಾರಣೆ

ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಪ್ರಸ್ತಾಪಿಸಿದ ಫ್ಯೂಚರ್ ರಿಟೇಲ್ ಲಿಮಿಟೆಡ್‌ನ ಹಿರಿಯ ವಕೀಲ ಡೇರಿಯಸ್ ಖಂಬಾಟಾ ಅವರು ಇಂದು (ಬುಧವಾರ) ಮಧ್ಯಾಹ್ನವೇ ತಡೆಯಾಜ್ಞೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
Amazon, Future Group, and Reliance
Amazon, Future Group, and Reliance
Published on

ರಿಲಯನ್ಸ್‌ ಜೊತೆಗಿನ ಒಪ್ಪಂದದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಂಗಳವಾರ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶದ ವಿರುದ್ಧ ಫ್ಯೂಚರ್‌ ರಿಟೇಲ್‌ ಬುಧವಾರ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಪ್ರಕರಣವನ್ನು ನಾಳೆ (ಗುರುವಾರ) ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ತಿಳಿಸಿದೆ.

ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಪ್ರಸ್ತಾಪಿಸಿದ ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ನ ಹಿರಿಯ ವಕೀಲ ಡೇರಿಯಸ್‌ ಖಂಬಾಟಾ ಅವರು ಇಂದು (ಬುಧವಾರ) ಮಧ್ಯಾಹ್ನವೇ ತಡೆಯಾಜ್ಞೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. “ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ ಅನ್ನು ದಿವಾಳಿತನದಿಂದ ಉಳಿಸಬೇಕಾಗುತ್ತದೆ. ಇಲ್ಲದಿದ್ದರೆ ನಾಳೆ ಪ್ರಕರಣ ಕೈಗೆತ್ತಿಕೊಳ್ಳಬಹುದಿತ್ತು ಎಂದು ಅವರು ಹೇಳಿದರು.

ಈ ಪ್ರಸ್ತಾಪವನ್ನು ವಿರೋಧಿಸಿದ ಅಮೆಜಾನ್‌ ಪರ ಹಿರಿಯ ನ್ಯಾಯವಾದಿ ರಾಜೀವ್‌ ನಾಯರ್‌ ನ್ಯಾಯಾಲಯದ ಕಾರ್ಯವಿಧಾನವನ್ನು ಅನುಸರಿಸಬೇಕು ಎಂದು ವಾದಿಸಿದರು. ಪ್ರಕರಣವನ್ನು ಇಂದೇ ಕೈಗೆತ್ತಿಕೊಳ್ಳುವ ವಿಚಾರವನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಪಟೇಲ್‌ ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದರು.

Also Read
ಶಾಸನಬದ್ಧ ಸಂಸ್ಥೆಗಳಿಗೆ ಪತ್ರ ಬರೆಯುವುದರಿಂದ ಅಮೆಜಾನ್‌ ನಿಯಂತ್ರಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್‌

ಕಿಶೋರ್ ಬಿಯಾನಿಯ ಫ್ಯೂಚರ್ ಗ್ರೂಪ್ ಕಂಪನಿಗಳು, ಅಧಿಕಾರಿಗಳು ಒಪ್ಪಂದಕ್ಕೆ ಸಂಬಂಧಿಸಿದಂತೆ ಶಾಸನಬದ್ಧ ಪ್ರಾಧಿಕಾರ ನೀಡಿದ ಅನುಮೋದನೆ ಮೇಲೆ ಅವಲಂಬಿತವಾಗುವುದನ್ನು ತಡೆಯಬೇಕು ಎಂದು ಅಮೆಜಾನ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕಾಯ್ದಿರಿಸಿದ ನ್ಯಾ. ಜೆ ಆರ್‌ ಮಿಧಾ ಅವರಿದ್ದ ಏಕಸದಸ್ಯ ಪೀಠ ರಿಲಯನ್ಸ್‌ ಒಪ್ಪಂದದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿತ್ತು.

ಅಮೆಜಾನ್- ಫ್ಯೂಚರ್‌ ವಿವಾದದಲ್ಲಿ ಜಾರಿಯಾಗಿರುವ ತುರ್ತು ತೀರ್ಪನ್ನು ಉಲ್ಲಂಘಿಸುವ ಎಲ್ಲಾ ಪ್ರಕರಣಗಳಲ್ಲಿ ಅಧಿಕಾರಿಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು 10 ದಿನಗಳಲ್ಲಿ ಪ್ರಕರಣದ ಸ್ಥಿತಿಗತಿ ಕುರಿತು ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಲ್ಲದೆ ರಿಲಯನ್ಸ್‌ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ತುರ್ತು ತೀರ್ಪು ನೀಡಿದ ದಿನಾಂಕದ ನಂತರ ಅಂದರೆ ಅಕ್ಟೋಬರ್ 25, 2020 ರ ಬಳಿಕ ಅದು ಇರಿಸಿದ ಎಲ್ಲಾ ಹೆಜ್ಜೆಗಳು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ಗೆ ನಿರ್ದೇಶನ ನೀಡಲಾಗಿದೆ.

ಫ್ಯೂಚರ್‌ ರಿಟೇಲ್‌ ಲಿಮಿಟೆಡ್‌ ವಿರುದ್ಧ ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡಿದೆ. ತುರ್ತು ಪರಿಸ್ಥಿತಿ ಅನೂರ್ಜಿತವಲ್ಲ ಮತ್ತು ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್‌ 17 (2) ರ ಅಡಿಯಲ್ಲಿ ಅದನ್ನು ಜಾರಿಗೊಳಿಸಬಹುದು ಎಂದು ಏಕಸದಸ್ಯ ಪೀಠ ನಿನ್ನೆ ಹೇಳಿತ್ತು.

ತುರ್ತು ಮಧ್ಯಸ್ಥಿಕೆ ಎಫ್‌ಆರ್‌ಎಲ್ ವಿರುದ್ಧ ಸರಿಯಾಗಿ ಮುಂದುವರಿಯಿತು, ತುರ್ತು ಪ್ರಶಸ್ತಿ ಶೂನ್ಯವಲ್ಲ ಮತ್ತು ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 17 (2) ರ ಅಡಿಯಲ್ಲಿ ಅದನ್ನು ಜಾರಿಗೊಳಿಸಬಹುದು ಎಂದು ಮಂಗಳವಾರ ಏಕಸದಸ್ಯ ಪೀಠ ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com