![ಅಮೆಜಾನ್- ಫ್ಯೂಚರ್ ವಿವಾದ: ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಒಟ್ಟಿಗೆ ಆಲಿಸಲಿರುವ ದೆಹಲಿ ಹೈಕೋರ್ಟ್ [ಚುಟುಕು]](https://gumlet.assettype.com/barandbench-kannada%2F2022-02%2F477bbfd7-10c4-4a2d-80a2-57e75285c516%2Fbarandbench_2021_06_7530b142_e213_41ee_87cf_cf9215132d7a_Justice_C_Hari_Shankar.jpg?auto=format%2Ccompress&fit=max)
Justice C Hari Shankar
ಅಮೆಜಾನ್-ಫ್ಯೂಚರ್ ಗ್ರೂಪ್ ನಡುವಣ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ವಿಚಾರಣೆ ನಡೆಸಲಿದ್ದಾರೆ. ಗುರುವಾರದೊಳಗೆ ವ್ಯಾಜ್ಯಕ್ಕೆ ಸಂಬಂಧಿಸಿದ ಕಿರು ಟಿಪ್ಪಣಿಗಳನ್ನು ದಾಖಲಿಸುವಂತೆ ದೆಹಲಿ ಹೈಕೋರ್ಟ್ ಎರಡೂ ಕಡೆಯ ವಕೀಲರಿಗೆ ಸೂಚಿಸಿದೆ. ವಿಳಂಬವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸುವುದಾಗಿ ನ್ಯಾ. ಹರಿಶಂಕರ್ ಈ ವೇಳೆ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.