ಪಾತಕಿ ರಾಜಕಾರಣಿ ಮುಖ್ತಾರ್‌ ಅನ್ಸಾರಿ ಸಹಚರ ಜೀವಾ ಹತ್ಯೆ; ಲಖನೌ ನ್ಯಾಯಾಲಯದಲ್ಲಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಬಿಜೆಪಿ ಹಿರಿಯ ನಾಯಕ ಬ್ರಹ್ಮದತ್ ದ್ವಿವೇದಿ ಹತ್ಯೆ ಪ್ರಕರಣದಲ್ಲಿ ಜೀವಾ ಆರೋಪಿಯಾಗಿದ್ದ.
Guns
Guns

ಉತ್ತರ ಪ್ರದೇಶದ ಮಾಜಿ ಶಾಸಕ ಹಾಗೂ ಪಾತಕಿ ಮುಖ್ತಾರ್‌ ಅನ್ಸಾರಿಯ ನಿಕಟವರ್ತಿಯಾಗಿದ್ದ ಸಂಜೀವ್ ಜೀವಾನನ್ನು ಬುಧವಾರ ಲಖನೌ ಸಿವಿಲ್ ನ್ಯಾಯಾಲಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಬಿಜೆಪಿ ಹಿರಿಯ ನಾಯಕ ಬ್ರಹ್ಮದತ್ ದ್ವಿವೇದಿ ಹತ್ಯೆ ಪ್ರಕರಣದಲ್ಲಿ ಜೀವಾ ಆರೋಪಿಯಾಗಿದ್ದ.

Also Read
ಅಪಹರಣ, ಕೊಲೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ದೋಷಿ, 10 ವರ್ಷ ಜೈಲು: ಗಾಜಿಪುರ ನ್ಯಾಯಾಲಯ ತೀರ್ಪು

ಜೀವಾನನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು, ಆತ ನ್ಯಾಯಾಲಯದ ಕೋಣೆಗೆ ಪ್ರವೇಶಿಸುತ್ತಿದ್ದಾಗ ವಕೀಲರಂತೆ ವೇಷಧರಿಸಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಆತನನ್ನು ಕೊಲೆಗೈದಿದ್ದಾರೆ. ಈ ವೇಳೆ ಪೋಲೀಸರೊಬ್ಬರ ಕಾಲಿಗೂ ಗುಂಡು ತಗುಲಿದೆ ಎಂದು ವರದಿಯಾಗಿದೆ.

ಸ್ಥಳದಲ್ಲಿದ್ದ ವಕೀಲರು ದಾಳಿಕೋರರಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com