ಗೇಟ್‌ 2022: ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ [ಚುಟುಕು]

Supreme Court, Exams

Supreme Court, Exams

ಸ್ನಾತಕೋತ್ತರ ಇಂಜಿಯರಿಂಗ್‌ ಪರೀಕ್ಷೆಗಳ ಪ್ರವೇಶಾತಿಗಾಗಿ ಇದೇ ಫೆಬ್ರವರಿಯಲ್ಲಿ ನಡೆಯಲಿರುವ ಗೇಟ್‌ 2022 ಪ್ರವೇಶ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ಸಿಜೆಐ ಎನ್‌ ವಿ ರಮಣ ಅವರ ಪೀಠದ ಮುಂದೆ ಅರ್ಜಿಯ ಉಲ್ಲೇಖವನ್ನು ಮಾಡಲಾಯಿತು.

ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಐಐಟಿ-ಖರಗಪುರಕ್ಕೆ (ಗೇಟ್‌ ಸಂಘಟನಕಾರರು) ನಿರ್ದೇಶಿಸಲು ಕೋರಿ ಗೇಟ್‌ ಪ್ರವೇಶಾರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಗೇಟ್‌ 2022 ಪರೀಕ್ಷಾ ವೇಳಾಪಟ್ಟಿಯು ಪ್ರಕಟವಾಗಿದ್ದು ಫೆಬ್ರವರಿ 5, 6, 12 ಮತ್ತು 13ರಂದು ಭೌತಿಕ ಪರೀಕ್ಷೆಯು ನಡೆಯಲಿದೆ.

ಹೆಚ್ಚಿನ ವಿವರಗಳಿಗೆ 'ಬಾರ್‌ ಅಂಡ್‌ ಬೆಂಚ್‌' ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com