ಅಸ್ಸಾಂನಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಕನಿಷ್ಠ ವಯೋಮಿತಿ ಅಗತ್ಯತೆ ಎತ್ತಿ ಹಿಡಿದ ಗುವಾಹಟಿ ಹೈಕೋರ್ಟ್ [ಚುಟುಕು]

ಅಸ್ಸಾಂನಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಕನಿಷ್ಠ ವಯೋಮಿತಿ ಅಗತ್ಯತೆ ಎತ್ತಿ ಹಿಡಿದ  ಗುವಾಹಟಿ ಹೈಕೋರ್ಟ್ [ಚುಟುಕು]
ramesh sogemane

ಅಸ್ಸಾಂನಲ್ಲಿ ಜಿಲ್ಲಾ ನ್ಯಾಯಾಧೀಶರಿಗೆ ಕನಿಷ್ಠ ವಯೋಮಿತಿ ಅಗತ್ಯತೆಯನ್ನು ಗುವಾಹಟಿ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಸೌಮಿತ್ರಾ ಸೈಕಿಯಾ ಅವರಿದ್ದ ಪೀಠ ಅಸ್ಸಾಂ ನ್ಯಾಯಾಂಗ ಸೇವಾ ನಿಯಮ 7 ಅನ್ನು ಎತ್ತಿಹಿಡಿದು, ರಾಜ್ಯದಲ್ಲಿ ಗ್ರೇಡ್-1 ನ್ಯಾಯಾಂಗ ಅಧಿಕಾರಿಗಳಾಗಿ ನೇಮಕವಾಗುವವರಿಗೆ ಕನಿಷ್ಠ 35 ವರ್ಷ ವಯಸ್ಸಾಗಿರಬೇಕು ಎಂದು ಸೂಚಿಸಿತು.

ಸಂವಿಧಾನವಾಗಲೀ ಇತರೆ ರಾಜ್ಯಗಳ ನಿಯಮಾವಳಿಗಳಾಗಲೀ ಕನಿಷ್ಠ ವಯಸ್ಸಿನ ಮಾನದಂಡವನ್ನು ಹೇಳದ ಕಾರಣ ಇದು ಕಾನೂನು ಬಾಹಿರ ಎಂದು ಅರ್ಜಿದಾರರಾದ ವಕೀಲೆ ಪೂಜಾ ಅಗರ್‌ವಾಲ್‌ ಈ ಹಿಂದಿನ ವಿಚಾರಣೆ ವೇಳೆ ವಾದಿಸಿದ್ದರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.