ಎನ್‌ಜಿಟಿಗೆ ತಜ್ಞ ಸದಸ್ಯರಾಗಿ ಸೇರ್ಪಡೆಯಾಗಲು ತಮಿಳುನಾಡು ಮಾಜಿ ಮುಖ್ಯ ಕಾರ್ಯದರ್ಶಿ ಗಿರಿಜಾ ವೈದ್ಯನಾಥನ್‌ ನಿರಾಕರಣೆ

ಗಿರಿಜಾ ಅವರನ್ನು ತಜ್ಞ ಸದಸ್ಯರಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
National Green Tribunal (NGT)
National Green Tribunal (NGT)

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್‌ಜಿಟಿ) ತಜ್ಞ ಸದಸ್ಯರಾಗಿ ಅಧಿಕಾರ ಸ್ವೀಕರಿಸಲು ತಮಿಳುನಾಡಿನ ಮಾಜಿ ಮುಖ್ಯ ಕಾರ್ಯದರ್ಶಿ ಗಿರಿಜಾ ವೈದ್ಯನಾಥನ್‌ ನಿರಾಕರಿಸಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎನ್‌ಜಿಟಿ ಪ್ರಧಾನ ಪೀಠವು ಮಂಗಳವಾರ ಕೆ ಸತ್ಯಗೋಪಾಲ್‌ ಅವರನ್ನು ನೇಮಕ ಮಾಡಲು ನಿರ್ದೇಶಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮದ್ರಾಸ್‌ ಹೈಕೋರ್ಟ್‌ ಗಿರಿಜಾ ಅವರ ನೇಮಕಾತಿಯನ್ನು ವಜಾಗೊಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಆ ಸ್ಥಾನಕ್ಕೇರಲು ಅಸಮ್ಮತಿಸಿದ್ದಾರೆ. ಪೂವುಲಗಿನ್‌ ನನ್ಬಾರ್ಗಲ್‌ ಎಂಬ ಸರ್ಕಾರೇತರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಜಿ ಸುಂದರರಾಜನ್‌ ಅವರು ಗಿರಿಜಾ ನೇಮಕಾತಿಯನ್ನು ಪ್ರಶ್ನಿಸಿದ್ದರು.

Also Read
ಎನ್‌ಜಿಟಿ ತಜ್ಞ ಸದಸ್ಯೆಯಾಗಿ ಗಿರಿಜಾ ವೈದ್ಯನಾಥನ್ ಅವರ ನೇಮಕ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಗಿರಿಜಾ ಅವರು ನ್ಯಾಯಾಧಿಕರಣದ ಸದಸ್ಯರಾಗುವಷ್ಟು ಪರಿಸರ ವಿಚಾರಗಳಲ್ಲಿ ಆಡಳಿತ ಅನುಭವ ಹೊಂದಿಲ್ಲ ಎಂದು ಸುಂದರರಾಜನ್‌ ತಗಾದೆ ಎತ್ತಿದ್ದರು. ಎನ್‌ಜಿಟಿ ಕಾಯಿದೆಯ ಸೆಕ್ಷನ್ 5ರ ಅಡಿಯಲ್ಲಿ ಹಿರಿಯ ಅಧಿಕಾರಿಗಳನ್ನು ತಜ್ಞ ಸದಸ್ಯರನ್ನಾಗಿ ನೇಮಿಸಲು ಅಗತ್ಯವಾದ ಅನುಭವಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ದ್ವಂದ್ವಗಳಿರುವುದನ್ನು ಅರ್ಜಿಯು ಎತ್ತಿ ತೋರಿಸುತ್ತದೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಆದಾಗ್ಯೂ, ಅರ್ಜಿಯು ಸ್ಪಷ್ಟತೆಯನ್ನು ಹೊಂದಿಲ್ಲ ಎಂದು ವಜಾಗೊಳಿಸಿತು.

ಮದ್ರಾಸ್‌ ಹೈಕೋರ್ಟ್‌ ತಮ್ಮ ಮನವಿಯನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಸುಂದರರಾಜನ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com