ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ಬಾಂಗ್ಲಾದೇಶಕ್ಕೆ ಕಳ್ಳಸಾಗಣೆಯಾಗಿದ್ದ ಹುಡುಗಿಯ ರಕ್ಷಣೆ [ಚುಟುಕು]

Calcutta High Court and West Bengal-Bangladesh region

Calcutta High Court and West Bengal-Bangladesh region

ಕಲ್ಕತ್ತಾ ಉಚ್ಚ ನ್ಯಾಯಾಲಯದ ಸಮಯೋಚಿತ ಮಧ್ಯಪ್ರವೇಶದಿಂದಾಗಿ, ಅಪಹರಣ ಮಾಡಿ ಬಾಂಗ್ಲಾದೇಶಕ್ಕೆ ರವಾನಿಸಲಾಗಿದ್ದ 16 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ. ಬಾಲಕಿಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ವಾಪಸ್ ಕಳುಹಿಸುವಂತೆ ಕೋರಿ ಬಾಲಕಿಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ರಾಜಶೇಖರ್ ಮಂಥ ಅವರಿದ್ದ ಏಕಸದಸ್ಯ ಪೀಠ ಕೇಂದ್ರ ಮತ್ತು ಪಶ್ಚಿಮಬಂಗಾಳ ಸರ್ಕಾರಗಳಿಗೆ ಸೂಚನೆಗಳನ್ನು ನೀಡಿತು. ಪರಿಣಾಮ ಬಾಲಕಿ ಮತ್ತೆ ಪೋಷಕರ ಮಡಿಲು ಸೇರಿದಳು. ಇದೇ ವೇಳೆ ನ್ಯಾಯಾಲಯ 32, 226ನೇ ವಿಧಿಗಳು ಸಂವಿಧಾನದ ಜೀವಾಳ ಎಂದು ಅಭಿಪ್ರಾಯಪಟ್ಟಿತು.

ಸಂವಿಧಾನದ 226ನೇ ವಿಧಿಯ ಅನ್ವಯ ಇರುವ ಅಧಿಕಾರವನ್ನು ಬಳಸಿದ ಹೈಕೋರ್ಟ್‌ (ತಮ್ಮ ನ್ಯಾಯಾಂಗ ವ್ಯಾಪ್ತಿಯಲ್ಲದೆ ಎಲ್ಲ ಪ್ರಾಂತ್ಯಗಳಲ್ಲೂ ಅರ್ಹ ಪ್ರಕರಣಗಳಲ್ಲಿ ಯಾವುದೇ ಸರ್ಕಾರ ಅಥವಾ ವ್ಯಕ್ತಿ, ಪ್ರಾಧಿಕಾರಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರ) ಬಾಲಕಿಯನ್ನು ಪೋಷಕರ ಮಡಿಲಿಗೆ ಸೇರಿಸಲು ಅಗತ್ಯವಿರುವ ಎಲ್ಲ ಕ್ರಮವನ್ನು ಸರ್ಕಾರ ಕೈಗೊಳ್ಳುಂತೆ ನಿರ್ದೇಶಗಳನ್ನು ನೀಡಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com