ನ್ಯಾಯಾಲಯವು ಒಂದು ನಿರ್ದಿಷ್ಟ ಧರ್ಮದ ಪಕ್ಷಪಾತಿ ಎಂದು ಪ್ರತಿಪಾದಿಸಿದ್ದ ವಕೀಲರೊಬ್ಬರ 2008ರಷ್ಟು ಹಿಂದಿನ ಪ್ರಕರಣವೊಂದನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ. ವಕೀಲ ಜಿ ಎಂ ದಾಸ್ ಅವರು ಬೇಷರತ್ ಕ್ಷಮೆಯಾಚನೆ ಬಳಿಕ ಪ್ರಕರಣವನ್ನು ಮುಕ್ತಾಯಗೊಳಿಸಿದ ನ್ಯಾಯಾಲಯ ಭವಿಷ್ಯದಲ್ಲಿ ಎಚ್ಚರವಹಿಸುವಂತೆ ಕಿವಿಮಾತು ಹೇಳಿತು. "...ಕೆಲವು ನ್ಯಾಯಾಲಯಗಳು ನಿರ್ದಿಷ್ಟ ಧರ್ಮ/ಸಮುದಾಯದ ಪರ ಅಥವಾ ವಿರುದ್ಧವಾಗಿ ಆದೇಶ ನೀಡುತ್ತ ಪಕ್ಷಪಾತಿಗಳಾಗಿರುವುದರಿಂದ, ಅಂತಹ ಸಂದರ್ಭಗಳಲ್ಲಿ ಗುಜರಾತ್ ರಾಜ್ಯದ ಹೊರಗೆ ವಿಚಾರಣೆ ನಡೆಸಲು ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶಿಸಿದೆ" ಎಂದು ವಕೀಲ ದಾಸ್ ವಿಚಾರಣೆಯೊಂದರಲ್ಲಿ ತಿಳಿಸಿದ್ದರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.