'ರಯೀಸ್' ಕಾಲ್ತುಳಿತ ವಿವಾದ: ಬಾಲಿವುಡ್ ನಟ ಶಾರೂಖ್ ವಿರುದ್ಧದ ಮೊಕದ್ದಮೆ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್ [ಚುಟುಕು]

Shah Rukh Khan, Raees
Shah Rukh Khan, Raees

2017ರಲ್ಲಿ ʼರಯೀಸ್ʼ ಚಿತ್ರದ ಪ್ರಚಾರದ ವೇಳೆ ಗುಜರಾತ್‌ನ ವಡೋದರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಕಾರಣವಾದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಗುಜರಾತ್ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ಶಾರೂಖ್‌ ಅವರ ತೀವ್ರ ನಿರ್ಲಕ್ಷ್ಯ ಅಥವಾ ಅಜಾಗರೂಕತೆಯ ಕಾರಣಕ್ಕೆ ಘಟನೆ ನಡೆದಿಲ್ಲ ಅಥವಾ ಅವರ ನಡೆ ಆಪಾದಿತ ಘಟನೆ ಸಂಭವಿಸಲು ಪರಿಣಾಮಕಾರಿ ಕಾರಣವಲ್ಲ ಎಂದು ನ್ಯಾ. ನಿಖಿಲ್‌ ಎಸ್‌ ಕರಿಯೆಲ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಪ್ರಚಾರದ ಸಮಯದಲ್ಲಿ, ಖಾನ್ ಅವರು 'ಸ್ಮೈಲಿ ಬಾಲ್' ಮತ್ತು 'ಟಿ-ಶರ್ಟ್'ಗಳನ್ನು ಗುಂಪಿನತ್ತ ಎಸೆದರು. ಪರಿಣಾಮ ನೂಕುನುಗ್ಗಲು ಉಂಟಾಯಿತು. ಘಟನೆಯಲ್ಲಿ ಕೆಲವರು ಗಾಯಗೊಂಡರು. ಕೆಲವರು ಪ್ರಜ್ಞಾಹೀನರಾದರೆ ಒಬ್ಬರು ಸಾವಿಗೀಡಾದರು ಎಂದು ಆರೋಪಿಸಲಾಗಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com