ಪತ್ನಿಗೆ ವಿವಾಹೇತರ ಸಂಬಂಧ ಇದ್ದರೂ ಗಂಡನಿಗೆ ಮಕ್ಕಳ ಪಾಲನೆ ಹೊಣೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ [ಚುಟುಕು]

ಪತ್ನಿಗೆ ವಿವಾಹೇತರ ಸಂಬಂಧ ಇದ್ದರೂ ಗಂಡನಿಗೆ ಮಕ್ಕಳ ಪಾಲನೆ ಹೊಣೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ [ಚುಟುಕು]
Child custody

ತನ್ನ 17 ಮತ್ತು 12 ವರ್ಷ ವಯಸ್ಸಿನ ಮಕ್ಕಳ ಪಾಲನೆಗಾಗಿ ತಂದೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಕುಟುಂಬ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ. ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದರೂ ಇದು ಮಕ್ಕಳಿಗೆ ಹೇಗೆ ಅಸುರಕ್ಷಿತ ಮತ್ತು ಅವರ ಜೀವನ ಹೇಗೆ ಅಪಾಯಕಾರಿ ಎಂಬುದನ್ನು ವಿವರಿಸಲು ಯಾವುದೇ ಆಧಾರಗಳಿಲ್ಲ ಎಂಬ ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯವನ್ನು ನ್ಯಾಯಮೂರ್ತಿ ಸಿ ಅಶೋಕ್‌ ಕುಮಾರ್‌ ಗಣನೆಗೆ ತೆಗೆದುಕೊಂಡರು. ಕೌಟುಂಬಿಕ ನ್ಯಾಯಾಲಯ ಯಾವುದೇ ತಪ್ಪು ಮಾಡಿಲ್ಲ ಎಂದ ಹೈಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com