ಉತ್ತರಪ್ರದೇಶದ ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ರಂಜಾನ್ ವೇಳೆ ವುಝು ಆಚರಣೆಗೆ (ಪವಿತ್ರ ದೈಹಿಕ ಶುದ್ಧೀಕರಣ) ಅನುಮತಿ ನೀಡುವಂತೆ ಕೋರಿ ಮುಸ್ಲಿಂ ಪಕ್ಷಕಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣವನ್ನು ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಗುರುವಾರ ಪ್ರಸ್ತಾಪಿಸಿದಾಗ, ಏಪ್ರಿಲ್ 14ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.
ಜ್ಞಾನವಾಪಿ ಮಸೀದಿಯ ವುಝು ನಡೆಯುವ ಪ್ರದೇಶದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪಕ್ಷಕಾರರು ಹೇಳಿಕೊಂಡ ಬಳಿಕ ಮಸೀದಿ ವಿವಾದದ ಕೇಂದ್ರಬಿಂದುವಾಗಿದೆ. ಆದರೆ, ವುಝು ನಡೆಯುವ ಸ್ಥಳದಲ್ಲಿರುವುದು ವುಝು ಆಚರಣೆಗೆ ನೀರು ಒದಗಿಸಲು ಬಳಸುತ್ತಿದ್ದ ಕಾರಂಜಿಯೇ ಹೊರತು ಶಿವಲಿಂಗವಲ್ಲ ಎನ್ನುವುದು ಮುಸ್ಲಿಂ ಪಕ್ಷಕಾರರ ವಾದ.
ಅಲ್ಲಿ ಪೂಜಿಸುವ ಮಸೀದಿ ಹಿಂದೂ ದೇವಾಲಯವಾಗಿದ್ದು ಈಗಲೂ ಅಲ್ಲಿ ಹಿಂದೂ ದೇವತೆಗಳ ಕುರುಹುಗಳಿವೆ. ಹೀಗಾಗಿ ಅಲ್ಲಿ ಪೂಜಿಸುವ ಹಕ್ಕನ್ನು ತಮಗೆ ನೀಡುವಂತೆ ಕೋರಿ ಹಿಂದೂ ಭಕ್ತರು ಸಿವಿಲ್ ನ್ಯಾಯಾಲಯದ ಮೊರೆ ಹೋಗುವ ಮೂಲಕ ಪ್ರಕರಣ ಕಣ್ತೆರೆದಿತ್ತು.