ಜ್ಞಾನವಾಪಿ ಪ್ರಕರಣ: ಹಿಂದೂಪಕ್ಷಕಾರರ ಅರ್ಜಿ ವಿಚಾರಣಾರ್ಹ ಎಂದಿದ್ದ ಆದೇಶ ವಜಾ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ ಮನವಿ

ಮೇಲ್ಮನವಿಯನ್ನು ಸೋಮವಾರ ವಿಚಾರಣೆ ನಡೆಸಲಿರುವ ನ್ಯಾಯಮೂರ್ತಿ ಜೆ. ಜೆ. ಮುನೀರ್.
ಜ್ಞಾನವಾಪಿ ಪ್ರಕರಣ: ಹಿಂದೂಪಕ್ಷಕಾರರ ಅರ್ಜಿ ವಿಚಾರಣಾರ್ಹ ಎಂದಿದ್ದ ಆದೇಶ ವಜಾ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ  ಮನವಿ
A1

ಜ್ಞಾನವಾಪಿ ಮಸೀದಿಯೊಳಗೆ ಪೂಜಾ ಹಕ್ಕು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮೊಕದ್ದಮೆ ವಿಚಾರಣಾರ್ಹ ಎಂದಿದ್ದ ವಾರಾಣಸಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ನಿರ್ವಹಣಾ ಸಮಿತಿ  ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಅಂಜುಮನ್ ಇಂತೆಜಾಮಿಯಾ ಮಸೀದಿ ವಾರಣಾಸಿ ಮತ್ತು ಶ್ರೀಮತಿ ರಾಖಿ ಸಿಂಗ್ ನಡುವಣ ಪ್ರಕರಣ].

ಮೇಲ್ಮನವಿಯನ್ನು ನ್ಯಾಯಮೂರ್ತಿ ಜೆ.ಜೆ.ಮುನೀರ್ ಅವರು ಸೋಮವಾರ ವಿಚಾರಣೆ ನಡೆಸಲಿದ್ದಾರೆ.

Also Read
ಜ್ಞಾನವಾಪಿ ಪ್ರಕರಣ: ಪೂಜಾ ಹಕ್ಕು ಕೋರಿದ್ದ ಹಿಂದೂ ಪಕ್ಷಕಾರರ ದಾವೆ ವಿಚಾರಣಾರ್ಹ ಎಂದ ವಾರಾಣಸಿ ನ್ಯಾಯಾಲಯ
Cause ListAllahabad High Court
Cause ListAllahabad High Court

ಸಿವಿಲ್ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ಆದೇಶ VII ನಿಯಮ 11ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣಾರ್ಹತೆ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಸೆಪ್ಟೆಂಬರ್ 12ರಂದು ವಾರಾಣಸಿ ಜಿಲ್ಲಾ ನ್ಯಾಯಾಧೀಶ ಡಾ.ಎ ಕೆ ವಿಶ್ವೇಶ ವಜಾಗೊಳಿಸಿದ್ದರು.

ಜ್ಞಾನವಾಪಿ ಮಸೀದಿ ಹಿಂದೂ ದೇಗುಲವಾಗಿದ್ದು ಅಲ್ಲಿ ಇನ್ನೂ ಹಿಂದೂ ದೇವತೆಗಳಿವೆ ಎಂಬ ಕಾರಣಕ್ಕೆ ಅಲ್ಲಿ ಪೂಜೆ ಸಲ್ಲಿಸುವ ಹಕ್ಕು ಕೋರಿದ್ದ ಹಿಂದೂ ಭಕ್ತರಿಂದಾಗಿ ಪ್ರಕರಣ ಜೀವ ತಳೆದಿತ್ತು.  

Related Stories

No stories found.
Kannada Bar & Bench
kannada.barandbench.com