ಜ್ಞಾನವಾಪಿ ಮಸೀದಿಯಲ್ಲಿ ಪೂಜಿಸುವ ಹಕ್ಕು ಪ್ರಶ್ನೆ: ಮುಸ್ಲಿಂ ಪಕ್ಷಕಾರರ ಅರ್ಜಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಪ್ರಾಚೀನ ದೇಗುಲವನ್ನು ಮರಳಿ ಪಡೆಯುವುದು ವಾರಾಣಸಿ ನ್ಯಾಯಾಲಯದಲ್ಲಿ 1991ರಲ್ಲಿ ಹೂಡಲಾಗಿದ್ದ ಮೊಕದ್ದಮೆಯ ಗುರಿಯಾಗಿದೆ.
 ಅಲಹಾಬಾದ್ ಹೈಕೋರ್ಟ್ ಮತ್ತು ಜ್ಞಾನವಾಪಿ ಮಸೀದಿ / ವಿವಾದ
ಅಲಹಾಬಾದ್ ಹೈಕೋರ್ಟ್ ಮತ್ತು ಜ್ಞಾನವಾಪಿ ಮಸೀದಿ / ವಿವಾದ

ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪೂಜೆ ಸಲ್ಲಿಸುವ ಹಕ್ಕು ಕೋರಿ ಹಿಂದೂ ಆರಾಧಕರು 1991ರಲ್ಲಿ ಸಲ್ಲಿಸಿದ್ದ ಸಿವಿಲ್ ಮೊಕದ್ದಮೆ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಅಲಾಹಾಬಾದ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು‌ ಈ ಸಂಬಂಧ ಸೋಮವಾರ ತೀರ್ಪು ನೀಡಿದರು. ಕಾಯ್ದೆಯಿಂದ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ದಾವೆಗೆ 1991ರ ಪೂಜಾ ಸ್ಥಳಗಳ {ವಿಶೇಷ ನಿಯಮಾವಳಿ) ಕಾಯಿದೆ ನಿರ್ಬಂಧಿಸದು ಎಂದು ನ್ಯಾಯಾಲಯ ತೀರ್ಮಾನಿಸಿದೆ.

ವಾರಾಣಸಿಯ ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಸಂಬಂಧಿಸಿದ ಮೊಕದ್ದಮೆ ವಾರಾಣಸಿ ನ್ಯಾಯಾಲಯದಲ್ಲಿ ಬಾಕಿ ಇದೆ.

ಪ್ರಸ್ತುತ ಜ್ಞಾನವಾಪಿ ಮಸೀದಿ ಇರುವ ಜ್ಞಾನವಾಪಿ ಆವರಣ ತಮ್ಮದೆಂದು ಹಿಂದೂ ಪಕ್ಷಕಾರರು ಹಕ್ಕು ಸಾಧಿಸಿದ್ದಾರೆ. ಮಸೀದಿ ಆವರಣ ದೇವಾಲಯದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಮ್ಮ ಮೊಕದ್ದಮೆಯಲ್ಲಿ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿಯ ಮೇಲ್ವಿಚಾರಣೆ ನಡೆಸುವ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ (ಮಸೀದಿ ನಿರ್ವಹಣಾ ಸಮಿತಿ) ಈ ದಾವೆಯನ್ನು ಪ್ರಶ್ನಿಸಿತ್ತು.

ಹಿಂದೂ ಪಕ್ಷಕಾರರ ದಾವೆ 1991ರ ಪೂಜಾ ಸ್ಥಳಗಳ {ವಿಶೇಷ ನಿಯಮಾವಳಿ) ಕಾಯಿದೆಯಿಂದ ನಿರ್ಬಂಧಿತವಾಗಿದೆ ಎಂದು ಉತ್ತರ ಪ್ರದೇಶ ಸುನ್ನಿ ಕೇಂದ್ರೀಯ ವಕ್ಫ್ ಮತ್ತು ಉತ್ತರ ಪ್ರದೇಶ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಸೇರಿದಂತೆ ಮುಸ್ಲಿಂ ಪಕ್ಷಕಾರರು ಮಂಡಿಸಿದ್ದ ಮುಖ್ಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

ಈ ವಿವಾದವು ಪೂಜಾ ಸ್ಥಳಗಳ ಕಾಯಿದೆ ಜಾರಿಗೆ ಬರುವುದಕ್ಕೂ ಮುಂಚಿತವಾದುದು ಎಂಬ ಆಧಾರದ ಮೇಲೆ ಹಿಂದೂ ಪಕ್ಷಕಾರರು ತಮ್ಮ 1991ರ ಮೊಕದ್ದಮೆಯನ್ನು ಸಮರ್ಥಿಸಿಕೊಂಡಿದ್ದರು ಎಂದು ವರದಿಯಾಗಿದೆ.

Kannada Bar & Bench
kannada.barandbench.com