ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಸಲ್ಲಿಸಿದ್ದ ಮನವಿ ವಿಚಾರಣೆ ಮೇ 30ಕ್ಕೆ ಮುಂದೂಡಿದ ವಾರಾಣಸಿ ನ್ಯಾಯಾಲಯ

"...ಇಂದು ವಾದ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೋಮವಾರ (ಮೇ 30) ಮಧ್ಯಾಹ್ನ 2 ಗಂಟೆಗೆ ವಾದಗಳು ಮುಂದುವರಿಯಲಿವೆ” ಎಂದು ಹಿಂದೂ ಪಕ್ಷಕಾರರ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದರು.
ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಸಲ್ಲಿಸಿದ್ದ ಮನವಿ ವಿಚಾರಣೆ ಮೇ 30ಕ್ಕೆ ಮುಂದೂಡಿದ ವಾರಾಣಸಿ ನ್ಯಾಯಾಲಯ

ಜ್ಞಾನವಾಪಿ ಮಸೀದಿ- ಕಾಶಿ ವಿಶ್ವನಾಥ ದೇಗುಲ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಪಕ್ಷಕಾರರು ಸಲ್ಲಿಸಿರುವ ಮನವಿಯ ವಿಚಾರಣಾರ್ಹತೆ ಪ್ರಶ್ನಿಸಿ ಅಂಜುಮಾನ್‌ ಇಂತೆಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೇ 30ಕ್ಕೆ ಮುಂದೂಡಿದೆ.

“ಪ್ರಕರಣದ ವಿಚಾರಣಾರ್ಹತೆ ಕುರಿತಂತೆ ಮುಸ್ಲಿಂ ಪಕ್ಷಕಾರರ ವಾದಗಳು ಇಂದು ಪೂರ್ಣಗೊಳ್ಳಲಿಲ್ಲ ಅದು ಮುಂದಿನ ವಿಚಾರಣೆಗಾಗಿ ನ್ಯಾಯಾಲಯ ನಿಗದಿಪಡಿಸಿದ ದಿನಾಂಕ ಮೇ 30ರಂದು ಮುಂದುವರೆಯಲಿದೆ” ಎಂದು ಜಿಲ್ಲಾ ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಹೇಳಿದರು.

ವಿಚಾರಣೆ ವೇಳೆ ಅರ್ಜಿದಾರರು, ವಕೀಲರು ಹಾಗೂ ಪ್ರತಿವಾದಿಗಳನ್ನು ಹೊರತುಪಡಿಸಿ ಉಳಿದವರಿಗೆ ನ್ಯಾಯಾಲಯದೊಳಗೆ ಪ್ರವೇಶ ನಿರಾಕರಿಸಲಾಗಿತ್ತು.

Also Read
[ಜ್ಞಾನವಾಪಿ] ಸಮೀಕ್ಷಾ ವರದಿಗೆ ಆಕ್ಷೇಪಣೆ ಆಹ್ವಾನಿಸಿದ ವಾರಾಣಸಿ ನ್ಯಾಯಾಲಯ: ಅರ್ಜಿ ನಿರ್ವಹಣೆಯ ವಿಚಾರಣೆ ಮೇ 26ಕ್ಕೆ

ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಪಕ್ಷಕಾರರ ಪರ ವಕೀಲ ವಿಷ್ಣು ಜೈನ್‌ “ಇಂದು ಮುಸ್ಲಿಂ ಪಕ್ಷಕಾರರು ನಮ್ಮ ಅರ್ಜಿಯಯ ಕೆಲ ಪ್ಯಾರಾಗಳನ್ನು ಓದಿ ಅರ್ಜಿ ವಿಚಾರಣಾಯೋಗ್ಯವಾಗಿಲ್ಲ ಎಂದು ಹೇಳಲು ಯತ್ನಿಸಿದರು. ನಾವು ಆಗ ಮಧ್ಯಪ್ರವೇಶಿಸಿ ನಮಗೆ ನಿರ್ದಿಷ್ಟ ಹಕ್ಕುಗಳಿದ್ದು ಎಲ್ಲಾ ಮನವಿಗಳನ್ನು ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆವು ಮುಸ್ಲಿಂ ಪಕ್ಷಕಾರರು ಇಂದು ತಮ್ಮ ವಾದ ಆರಂಭಿಸಿದರು. ಇಂದು ವಾದ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೋಮವಾರ (ಮೇ 30) ಮಧ್ಯಾಹ್ನ 2 ಗಂಟೆಗೆ ವಾದಗಳು ಮುಂದುವರಿಯಲಿವೆ” ಎಂದರು.

ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಕಮಿಷನರ್‌ ಸಲ್ಲಿಸಿದ್ದ ಸಮೀಕ್ಷಾ ವರದಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಎರಡೂ ಕಡೆಯ ಪಕ್ಷಕಾರರಿಗೆ ವಾರಾಣಸಿ ನ್ಯಾಯಾಲಯ ಮೇ 24ರಂದು ಒಂದು ವಾರ ಗಡುವು ನೀಡಿತ್ತು.

Related Stories

No stories found.
Kannada Bar & Bench
kannada.barandbench.com