ಕೇರಳ ರೈಲು ಅಭಿವೃದ್ಧಿ ಮಂಡಳಿ ನಿಯಮಿತದ (ಕೆ-ರೈಲು) ಸಿಲ್ವರ್‌ಲೈನ್ ಯೋಜನೆಯ ಬಗ್ಗೆ ತಾನು ತೀವ್ರ ಕಳವಳ ಹೊಂದಿರುವುದಾಗಿ ಕೇಂದ್ರ ಸರ್ಕಾರವು ಕೇರಳ ಹೈಕೋರ್ಟ್‌ಗೆ ತಿಳಿಸಿದ್ದು ಯೋಜನೆಗಾಗಿ ಭೂಸ್ವಾಧೀನವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಸಲಹೆ ನೀಡಿದೆ [ಕೇರಳ ಸರ್ಕಾರ ಮತ್ತಿತರರು ವರ್ಸಸ್ ಮುರಳಿಕೃಷ್ಣನ್ ಮತ್ತಿತರರು].
ಉಳುಮೆಗೆ ಯೋಗ್ಯವಾದ ಭೂಮಿ, ಸುಮಾರು 20 ಸಾವಿರ ಮನೆಗಳು, ಧಾರ್ಮಿಕ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಮುಂತಾದವುಗಳು ಯೋಜನೆಯಿಂದ ನಾಶವಾಗುವ ಬಗ್ಗೆ ಕೇಂದ್ರವು ಹಲವು ಮನವಿಗಳನ್ನು ಸ್ವೀಕರಿಸಿರುವುದಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ಮನು ಅವರು ನ್ಯಾ. ಎಸ್ ಮಣಿಕುಮಾರ್ ಮತ್ತು ನ್ಯಾ. ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠಕ್ಕೆ ತಿಳಿಸಿದರು.
ಹೆಚ್ಚಿನ ಮಾಹಿತಿಗೆ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.