ಯುಕ್ರೇನ್‌ನಿಂದ ಮರಳಿದವರ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಲು ಬೇರೆ ದೇಶಗಳಿಗೆ ಕೋರಿಕೆ: ಸುಪ್ರೀಂಗೆ ಕೇಂದ್ರ

Ukraine and Supreme Court
Ukraine and Supreme Court
Published on

ಯುದ್ಧಪೀಡಿತ ಯುಕ್ರೇನ್‌ನಿಂದ  ಹಿಂತಿರುಗಿದ ವಿದ್ಯಾರ್ಥಿಗಳನ್ನು ತಮ್ಮ ಮೊದಲ, ಎರಡನೇ ಅಥವಾ ಮೂರನೇ ವರ್ಷದ ಶಿಕ್ಷಣ ಪೂರ್ಣಗೊಳಿಸಲು ಬೇರೆ ದೇಶಗಳಿಗೆ ಕಳಿಸುವುದಕ್ಕಾಗಿ ವಿವಿಧ ರಾಷ್ಟ್ರಗಳೊಂದಿಗೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ ಎಂದು ಭಾರತದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದರು.

ಈ ಉದ್ದೇಶಕ್ಕಾಗಿ ಸಂಪರ್ಕಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದಾಗ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಪೋರ್ಟಲ್‌ ಅಭಿವೃದ್ಧಿಪಡಿಸುವಂತೆ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿತು. ಯುಕ್ರೇನ್‌ನಿಂದ ಹಿಂದಿರುಗಿದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ತಾಯ್ನಾಡಿನಲ್ಲಿಯೇ ಅಧ್ಯಯನ ಮುಂದುವರೆಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com