ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ನಿಧನ: ಹೈಕೋರ್ಟ್‌ಗೆ ರಜೆ ಘೋಷಣೆ

ರಾಜ್ಯ ಸರ್ಕಾರವು 26.12.2024ರಂದು ಹೊರಡಿಸಿರುವ ಅಧಿಸೂಚನೆ ಮತ್ತು 23.08.1993, 15.09.1993ರ ಪೂರ್ಣ ನ್ಯಾಯಾಲಯದ ನಿರ್ಣಯದ ಅನ್ವಯ ರಜೆ ಗೋಷಿಸಲಾಗಿದೆ.
ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ನಿಧನ: ಹೈಕೋರ್ಟ್‌ಗೆ ರಜೆ ಘೋಷಣೆ
Published on

ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ರಜೆ ಘೋಷಿಸಲಾಗಿದೆ. ವರ್ಗಾವಣೀಯ ಲಿಖಿತಗಳ ಕಾಯಿದೆ 1881ರ ಅಡಿ ರಜೆ ಘೋಷಿಸಲಾಗಿದೆ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‌ ಹೇಳಿದ್ದಾರೆ.

ರಾಜ್ಯ ಸರ್ಕಾರವು 26.12.2024ರಂದು ಹೊರಡಿಸಿರುವ ಅಧಿಸೂಚನೆ ಮತ್ತು 23.08.1993, 15.09.1993ರ ಪೂರ್ಣ ನ್ಯಾಯಾಲಯದ ನಿರ್ಣಯದ ಅನ್ವಯ ರಜೆ ಗೋಷಿಸಲಾಗಿದೆ.

ಯೋಜನಾ ಆಯೋಗದ ಉಪಾಧ್ಯಕ್ಷರು, ವಿಶ್ವವಿದ್ಯಾಲಯ ಅನುದಾನ ಆಯೋಗ ಅಧ್ಯಕ್ಷರು, ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಖ್ಯಸ್ಥರು, ವಿತ್ತ ಸಲಹೆಗಾರರು, ಹಣಕಾಸು ಸಚಿವರು ಮತ್ತು ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಡಾ. ಮನಮೋಹನ್‌ ಸಿಂಗ್‌ ಅವರು ದೇಶದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದಾರೆ.

Attachment
PDF
Adobe Scan Dec 27, 2024 (1)_241227_102800
Preview
Kannada Bar & Bench
kannada.barandbench.com