121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ರದ್ದು ಕೋರಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ದಾವಣಗೆರೆ ತಾಲ್ಲೂಕು ಬೀರಗೊಂಡನಹಳ್ಳಿಯ ಬಿ ವೈ ಪರಮೇಶ್ವರಪ್ಪ, ಜಿ ಎಸ್‌ಧನಂಜಯ ಮತ್ತು ಯಶೋದಮ್ಮ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
Karnataka High Court
Karnataka High Court

ತುಂಗಾ ಮೇಲ್ದಂಡೆ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಮತ್ತು ದಾವಣಗೆರೆ ತಾಲ್ಲೂಕು ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ, ಚನ್ನಗಿರಿ, ಮಾಯಕೊಂಡ, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕುಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ದಾವಣಗೆರೆ ತಾಲ್ಲೂಕು ಬೀರಗೊಂಡನಹಳ್ಳಿಯ ಬಿ ವೈ ಪರಮೇಶ್ವರಪ್ಪ, ಜಿ ಎಸ್‌ಧನಂಜಯ ಮತ್ತು ಯಶೋದಮ್ಮ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಆಕ್ಷೇಪಣೆ ಏನು?: ಈ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ; ನ್ಯಾಯಸಮ್ಮತ ಪರಿಹಾರ ಮತ್ತು ಪುನರ್ವಸತಿ ಕಾಯಿದೆ–2013ರ ಅನುಸಾರ ನಡೆದಿಲ್ಲ. ಜಮೀನು ವಶಪಡಿಸಿಕೊಳ್ಳಲಾದ ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಇದು ಸರ್ಕಾರಕ್ಕೆ ಹೊರೆಯಾಗಿರುವ ಆರ್ಥಿಕ ಯೋಜನೆ. ಇದೊಂದು ಅನಧಿಕೃತ ಯೋಜನೆಯಾಗಿದ್ದು ಇದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಉದ್ದೇಶಿತ ಯೋಜನೆಗೆ ವಿದ್ಯುತ್‌ ಒದಗಿಸಲು ಹಲವೆಡೆ ವಿದ್ಯುತ್‌ ಸ್ಟೇಶನ್‌ಗಳನ್ನು ನಿರ್ಮಿಸಬೇಕಿದೆ. ಇದಕ್ಕಾಗಿ ಎಂಟು ಗ್ರಾಮಗಳಲ್ಲಿ ಹಾದು ಹೋಗಲಿರುವ ಹೈಟೆನ್ಷನ್‌ ವೈರ್‌ನಿಂದ ಪರಿಶಿಷ್ಟ ಜಾತಿ ಮತ್ತು ವರ್ಗದವರೂ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ರೈತರ ದಿನನಿತ್ಯದ ಜೀವನಕ್ಕೆ ತೊಂದೆರಯಾಗಲಿದೆ. ಈ ಯೋಜನೆಗೆ ಹೊರಡಿಸಲಾಗಿರುವ ಅಧಿಸೂಚನೆ ವಿದ್ಯುತ್‌ ಕಾಯಿದೆ ಮತ್ತು ಟೆಲಿಗ್ರಾಫ್‌ ಕಾಯಿದೆ ಅನುಸಾರ ಇಲ್ಲ. ಹಾಗಾಗಿ, ಉದ್ದೇಶಿತ ಯೋಜನೆಯ ಹೈಟೆನ್ಷನ್‌ ವೈರ್ ಹಾದು ಹೋಗುವ ಮಾರ್ಗ ಬದಲಾವಣೆ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

Related Stories

No stories found.
Kannada Bar & Bench
kannada.barandbench.com