ಸಹಕಾರ ನಿಬಂಧಕರ ಕ್ರಮ ಪ್ರಶ್ನಿಸಿದ್ದ ಮೈಸೂರಿನ ವಸತಿ ನಿರ್ಮಾಣ ಸಹಕಾರ ಸಂಘದ ಅರ್ಜಿ ವಜಾ ಮಾಡಿದ ಹೈಕೋರ್ಟ್

ಮೈಸೂರು ಅರ್ಥ್ ಮೂವರ್ಸ್ ನೌಕರರ ವಸತಿ ನಿರ್ಮಾಣ ಸಹಕಾರ ಸಂಘವು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾ. ಆರ್‌ ದೇವದಾಸ್‌ ನೇತೃತ್ವದ ಏಕಸದಸ್ಯ ಪೀಠ.
High Court of Karnataka
High Court of Karnataka
Published on

ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸದಸ್ಯರೊಬ್ಬರು ನೀಡಿದ್ದ ದೂರು ಆಧರಿಸಿ, ಮೈಸೂರು ಅರ್ಥ್ ಮೂವರ್ಸ್ ನೌಕರರ ವಸತಿ ನಿರ್ಮಾಣ ಸಹಕಾರ ಸಂಘದ ವಿರುದ್ಧ ತನಿಖೆಗೆ ಆದೇಶಿಸಿದ್ದ ಸಹಕಾರ ನಿಬಂಧಕರ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಸಹಕಾರ ಸಂಘವು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಪ್ರಕರಣ ಸಂಬಂಧ ವಿಚಾರಣಾಧಿಕಾರಿ ನಡೆಸುವ ವಿಚಾರಣೆಯಲ್ಲಿ ವಾದ ಮಂಡಿಸಲು ಅರ್ಜಿದಾರ ಸೊಸೈಟಿಗೆ ಮುಕ್ತ ಅವಕಾಶವಿದೆ. ನೋಟಿಸ್ ಜಾರಿ ಹಂತದಲ್ಲಿರುವ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿ ವಜಾಗೊಳಿಸಿದೆ. ಜತೆಗೆ, ಸೊಸೈಟಿ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿ, 2015ರ ಅಕ್ಟೋಬರ್‌ 5ರಂದು ಹೊರಡಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪೀಠವು ತೆರವುಗೊಳಿಸಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯಿದೆ - 1959ರ ಸೆಕ್ಷನ್ 64(2)ರ ಪ್ರಕಾರ ಸಹಕಾರ ಸಂಘಗಳ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದು ಭಾಗದಷ್ಟು ಸದಸ್ಯರು ವಿಚಾರಣೆಗೆ ಮನವಿ ಸಲ್ಲಿಸಿದಾಗ ಮಾತ್ರ ರಿಜಿಸ್ಟ್ರಾರ್ ವಿಚಾರಣೆಗೆ ಆದೇಶಿಸಬಹುದು. ಈ ಪ್ರಕರಣದಲ್ಲಿ ಕೇವಲ ಒಬ್ಬ ಸದಸ್ಯನ ದೂರು ಆಧರಿಸಿ ವಿಚಾರಣೆಗೆ ಆದೇಶಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ವಾದಿಸಿದ್ದ ಸಂಘ, ಸದಸ್ಯರೊಬ್ಬರ ದೂರು ಆಧರಿಸಿ ವಿಚಾರಣೆಗೆ ಹೊರಡಿಸಿದ್ದ ಆದೇಶ ಹಾಗೂ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿತ್ತು.

ಈ ವಾದ ಒಪ್ಪದ ಪೀಠವು ಕೇವಲ ಒಬ್ಬ ಸದಸ್ಯ ದೂರು ನೀಡಿದರೂ ವಿಚಾರಣೆ ನಡೆಸುವ ಹಾಗೂ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವ ಅಧಿಕಾರವನ್ನು ಸಹಕಾರ ನಿಬಂಧಕರು ಹೊಂದಿದ್ದಾರೆ ಎಂಬುದಾಗಿ 2001ರಲ್ಲಿಯೇ ಹೈಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ, ಅರ್ಜಿ ವಜಾಗೊಳಿಸಿದೆ.

Also Read
ಹಣಕಾಸು ನಿಗಮ ಸ್ಥಾಪಿಸಲು ಜಾತಿಗಳ ನಡುವೆ ತಾರತಮ್ಯ ಮಾಡಲಾಗದು: ಕರ್ನಾಟಕ ಹೈಕೋರ್ಟ್‌

ಈ ವಾದ ಒಪ್ಪದ ಪೀಠವು ಕೇವಲ ಒಬ್ಬ ಸದಸ್ಯ ದೂರು ನೀಡಿದರೂ ವಿಚಾರಣೆ ನಡೆಸುವ ಹಾಗೂ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವ ಅಧಿಕಾರವನ್ನು ಸಹಕಾರ ನಿಬಂಧಕರು ಹೊಂದಿದ್ದಾರೆ ಎಂಬುದಾಗಿ 2001ರಲ್ಲಿಯೇ ಹೈಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ, ಅರ್ಜಿ ವಜಾಗೊಳಿಸಿದೆ.

ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದಸ್ಯರೊಬ್ಬರು ನೀಡಿದ್ದ ದೂರಿನ ಮೇರೆಗೆ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರು ‘ಮೈಸೂರು ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ’ಯ ಲೆಕ್ಕ ಪುಸ್ತಕಗಳ ಪರಿಶೀಲನೆ ನಡೆಸುವಂತೆ 2015ರ ಜನವರಿ 2ರಂದು ಆದೇಶಿಸಿದ್ದರು. ಈ ಸಂಬಂಧ ಉಪ ನಿಬಂಧಕರು ಸಹಾಯಕ ನಿಬಂಧಕರಿಗೆ ಜನವರಿ 30ರಂದು ಪತ್ರ ಬರೆದು, ಸಹಕಾರಿ ಸಂಘಗಳ ಕಾಯಿದೆಯ ಸೆಕ್ಷನ್ 64ರ ಅನುಸಾರ ವಿಚಾರಣೆ ನಡೆಸಬೇಕು ಅಥವಾ ಸೆಕ್ಷನ್ 65ರ ಅನುಸಾರ ಸೊಸೈಟಿಯ ಲೆಕ್ಕ ಪತ್ರಗಳನ್ನು ಪರಿಶೀಲನೆಗೊಳಪಡಿಸಿ, ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದರು. ಸಹಾಯಕ ನಿಬಂಧಕರು ಅರ್ಜಿದಾರ ಸಂಘದ ವಿರುದ್ಧ ವಿಚಾರಣೆ ನಡೆಸಲು ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಆ ಬಳಿಕ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಸೊಸೈಟಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಹೀಗಾಗಿ, ಸೊಸೈಟಿ ಹೈಕೋರ್ಟ್ ಮೆಟ್ಟಿಲೇರಿತ್ತು.

Kannada Bar & Bench
kannada.barandbench.com