ಹೈಕೋರ್ಟ್‌ಗಳು ನೀಡುವ ಆದೇಶ ಲಿಖಿತವಾಗಿರಬೇಕೆ ವಿನಾ ಮೌಖಿಕವಾಗಿರಬಾರದು: ಸುಪ್ರೀಂ ಕೋರ್ಟ್

"ನ್ಯಾಯಾಧೀಶರು ತಮ್ಮ ತೀರ್ಪು ಮತ್ತು ಆದೇಶಗಳ ಮೂಲಕ ಮಾತನಾಡುತ್ತಾರೆ. ಲಿಖಿತ ಪಠ್ಯಕ್ಕೆ ವಿಮರ್ಶೆಗೊಳಪಡುವ ಸಾಮರ್ಥ್ಯ ಇದೆ. ಮೌಖಿಕ ಹೇಳಿಕೆ ಚಾಲ್ತಿಯಲ್ಲಿರುವ ಕಡೆ ನ್ಯಾಯಾಂಗ ಹೊಣೆಗಾರಿಕೆಯ ಅಂಶ ಕಳೆದುಹೋಗುತ್ತದೆ" ಎಂದು ಪೀಠ ಹೇಳಿದೆ.
ಹೈಕೋರ್ಟ್‌ಗಳು ನೀಡುವ ಆದೇಶ ಲಿಖಿತವಾಗಿರಬೇಕೆ ವಿನಾ ಮೌಖಿಕವಾಗಿರಬಾರದು: ಸುಪ್ರೀಂ ಕೋರ್ಟ್

"ನ್ಯಾಯಾಧೀಶರು ತಮ್ಮ ತೀರ್ಪು ಮತ್ತು ಆದೇಶಗಳ ಮೂಲಕ ಮಾತನಾಡುತ್ತಾರೆ. ಲಿಖಿತ ಪಠ್ಯಕ್ಕೆ ವಿಮರ್ಶೆಗೊಳಪಡುವ ಸಾಮರ್ಥ್ಯ ಇದೆ. ಮೌಖಿಕ ಹೇಳಿಕೆ ಚಾಲ್ತಿಯಲ್ಲಿರುವೆಡೆ ನ್ಯಾಯಾಂಗ ಹೊಣೆಗಾರಿಕೆಯ ಅಂಶ ಕಳೆದುಹೋಗುತ್ತದೆ" ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಹೀಗೆ ಹೇಳುವ ಮೂಲಕ ವಂಚನೆ ಮತ್ತು ಫೋರ್ಜರಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಬಂಧನಕ್ಕೆ ತಡೆ ನೀಡುವ ಸಂಬಂಧ ಗುಜರಾತ್‌ ಹೈಕೋರ್ಟ್‌ ಮೌಖಿಕ ಆದೇಶ ಹೊರಡಿಸಲು ಅನುಸರಿಸಿದ ಪ್ರಕ್ರಿಯೆಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿತು.

"ನ್ಯಾಯಾಧೀಶರು ತಮ್ಮ ತೀರ್ಪು ಮತ್ತು ಆದೇಶಗಳ ಮೂಲಕ ಮಾತನಾಡುತ್ತಾರೆ. ಲಿಖಿತ ಪಠ್ಯಕ್ಕೆ ವಿಮರ್ಶೆಗೊಳಪಡುವ ಸಾಮರ್ಥ್ಯ ಇದೆ. ಮೌಖಿಕ ಹೇಳಿಕೆ ಚಾಲ್ತಿಯಲ್ಲಿರುವ ಕಡೆ ನ್ಯಾಯಾಂಗ ಹೊಣೆಗಾರಿಕೆಯ ಅಂಶ ಕಳೆದುಹೋಗುತ್ತದೆ ಇದು ಅಪಾಯಕಾರಿ ಪೂರ್ವನಿದರ್ಶನಕ್ಕೆ ಕಾರಣವಾಗಲಿದ್ದು ಸ್ವೀಕಾರಾರ್ಹವಲ್ಲ. ನ್ಯಾಯಾಧೀಶರು, ಸಾರ್ವಜನಿಕ ಅಧಿಕಾರಿಗಳಂತೆಯೇ ಕೆಲಸ ನಿರ್ವಹಿಸಬೇಕಿದ್ದು ತಮ್ಮ ಕಾರ್ಯಗಳಿಗೆ ಹೊಣೆಗಾರರಾಗಿರುತ್ತಾರೆ," ಎಂದು ಪೀಠ ಹೇಳಿದೆ. ಆದ್ದರಿಂದ, ಪ್ರಸ್ತುತ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಅನುಸರಿಸಿದ ಕಾರ್ಯವಿಧಾನವನ್ನು ಭವಿಷ್ಯದಲ್ಲಿ ರದ್ದುಗೊಳಿಸಬೇಕು ಎಂದು ಅದು ಹೇಳಿದೆ.

ಕ್ರಿಮಿನಲ್ ನ್ಯಾಯದಾನ ಎಂಬುದು ದೂರುದಾರ ಮತ್ತು ಆರೋಪಿಯ ನಡುವಿನ ಖಾಸಗಿ ವಿಷಯವಲ್ಲ ಬದಲಿಗೆ ಕಾನೂನು ಸುವ್ಯವಸ್ಥೆಯನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಸರ್ಕಾರದ ವಿಶಾಲ ಹಿತಾಸಕ್ತಿಯನ್ನು ಸೂಚಿಸುತ್ತದೆ. ಹಾಗಾಗಿ, ಹೈಕೋರ್ಟ್‌ಗಳ ಮೌಖಿಕ ನಿರ್ದೇಶನಗಳು ಗಂಭೀರ ತಪ್ಪುಗ್ರಹಿಕೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದಿತು.

ಅಲ್ಲದೆ "ಬಂಧನ ತಡೆಯುವ ಮೌಖಿಕ ನಿರ್ದೇಶನಗಳನ್ನು ನೀಡುವುದು ನ್ಯಾಯಾಂಗ ದಾಖಲೆಯ ಭಾಗವಾಗುವುದಿಲ್ಲ. ಹೀಗಾಗಿ ಅದನ್ನು ತಪ್ಪಿಸಬೇಕು" ಎಂದು ಸುಪ್ರೀಂಕೋರ್ಟ್‌ ಹೇಳಿತು.

"ನ್ಯಾಯಾಂಗ ಪ್ರಕ್ರಿಯೆಯ ಸಮಯದಲ್ಲಿ ಏನಾಯಿತು ಎಂಬುದರ ಲಿಖಿತ ದಾಖಲೆ ಇಲ್ಲದಿದ್ದರೆ, ಪಕ್ಷಕಾರರು ಮತ್ತು ತನಿಖಾ ಅಧಿಕಾರಿ ದಾಖಲೆಯಿಲ್ಲದ ಮೌಖಿಕ ಅವಲೋಕನಗಳನ್ನು ಅವಲಂಬಿಸಬೇಕು ಎಂದು ನಿರೀಕ್ಷಿಸಿದರೆ ಅದು ಅಪಾಯಕಾರಿ ಪೂರ್ವನಿದರ್ಶನಗಳಿಗೆ ಎಡೆ ಮಾಡಿಕೊಡುತ್ತದೆ" ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಂಶಿನ್ ಎಚ್ ದೇಸಾಯಿ ಹಾಜರಾದರು. ಹಿರಿಯ ವಕೀಲ ಮನೋಜ್ ಸ್ವರೂಪ್ ಪ್ರತಿವಾದಿಯನ್ನು ಪ್ರತಿನಿಧಿಸಿದರು. ವಕೀಲರಾದ ಕನು ಅಗರವಾಲ್ ಗುಜರಾತ್ ರಾಜ್ಯದ ಪರವಾಗಿ ಹಾಜರಾದರು.

Related Stories

No stories found.
Kannada Bar & Bench
kannada.barandbench.com