ಹಿಂದೂ ಧರ್ಮ ʼಜೀವನ ವಿಧಾನʼ ಎಂಬ ಸುಪ್ರೀಂ ಕೋರ್ಟ್‌ ತರ್ಕ ಪ್ರಶ್ನಿಸಿದ ನ್ಯಾ. ಕೆ ಎಂ ಜೋಸೆಫ್‌

ಸಾಮಾನ್ಯವಾಗಿ "ಹಿಂದುತ್ವ ಪ್ರಕರಣಗಳು" ಎನ್ನಲಾಗುವ 1995ರಿಂದ 1998ರ ನಡುವಣ ಪ್ರಕರಣಗಳಲ್ಲಿ ಹಿಂದೂ ಧರ್ಮವನ್ನು ವ್ಯಾಖ್ಯಾನಿಸಲು ಸುಪ್ರೀಂ ಕೋರ್ಟ್ ಅಳವಡಿಸಿಕೊಂಡ ತರ್ಕವನ್ನು ನ್ಯಾ. ಜೋಸೆಫ್ ಅವರು ನಿರ್ದಿಷ್ಟವಾಗಿ ನಿರಾಕರಿಸಿದರು.
ನ್ಯಾಯಮೂರ್ತಿ ಕೆ.ಎಂ.ಜೋಸೆಫ್
ನ್ಯಾಯಮೂರ್ತಿ ಕೆ.ಎಂ.ಜೋಸೆಫ್

ಹಿಂದೂ ಧರ್ಮದ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ವಿವಿಧ ತೀರ್ಪುಗಳನ್ನು ಚರ್ಚಿಸಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಅವರು ʼಹಿಂದೂ ಧರ್ಮ ಬಹುಪಾಲು ಧರ್ಮವೇ ಆಗಿದೆʼ ಎಂದಿದ್ದಾರೆ.

ನಿರಂತರ ಕಾನೂನು ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಕೇರಳ ಹೈಕೋರ್ಟ್ ವಕೀಲರ ಸಂಘದ (ಕೆಎಚ್‌ಸಿಎಎ) ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʼಸಂವಿಧಾನದಲ್ಲಿ ಜಾತ್ಯತೀತೆಯ ಪರಿಕಲ್ಪನೆʼ ಎಂಬ ವಿಷಯವಾಗಿ ನ್ಯಾ. ಜೋಸೆಫ್‌ ಅವರು ಉಪನ್ಯಾಸ ನೀಡಿದರು.

ಸಾಮಾನ್ಯವಾಗಿ "ಹಿಂದುತ್ವ ಪ್ರಕರಣಗಳು" ಎನ್ನಲಾಗುವ 1995ರಿಂದ 1998ರ ನಡುವಣ ಪ್ರಕರಣಗಳಲ್ಲಿ ಹಿಂದೂ ಧರ್ಮವನ್ನು ವ್ಯಾಖ್ಯಾನಿಸಲು ಸುಪ್ರೀಂ ಕೋರ್ಟ್ ಅಳವಡಿಸಿಕೊಂಡ ಹಿಂದೂ ಧರ್ಮ ʼಜೀವನ ವಿಧಾನʼ ಎಂಬ ತರ್ಕವನ್ನು ನ್ಯಾ. ಜೋಸೆಫ್ ಅವರು ನಿರಾಕರಿಸಿದರು.

ನ್ಯಾ. ಜೋಸೆಫ್‌ ಅವರ ಅಭಿಪ್ರಾಯಗಳ ಪ್ರಮುಖಾಂಶಗಳು

  • ಹಿಂದೂ ಧರ್ಮವನ್ನು ಒಂದು ಧರ್ಮವೆಂದು ಪರಿಗಣಿಸದೆ ಸುಪ್ರೀಂ ಕೋರ್ಟ್‌ ತರ್ಕವನ್ನು ಅಳವಡಿಸಿಕೊಂಡರೆ, ಹಿಂದೂಗಳು ಅನಾನುಕೂಲಕ್ಕೆ ಒಳಗಾಗುತ್ತಾರೆ, ಏಕೆಂದರೆ ಅವರು ಇತರ ಧರ್ಮಗಳಿಗೆ ಲಭ್ಯವಿರುವ ಭಾರತದ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಹಕ್ಕುಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ.

  • ಆದ್ದರಿಂದ, ಕಾನೂನು ಮತ್ತು ಸಾಂವಿಧಾನಿಕ ಉದ್ದೇಶಗಳಿಗಾಗಿ ಹಿಂದೂ ಧರ್ಮವನ್ನು ಧರ್ಮವೆಂದು ಪರಿಗಣಿಸಬೇಕಾಗಿದೆ.

  • ಹಿಂದೂ ಧರ್ಮವನ್ನು ವ್ಯಾಖ್ಯಾನಿಸುವುದು ತುಂಬಾ ಕಷ್ಟ ಎಂಬ ಹಿಂದಿನ ತೀರ್ಪುಗಳ ಆಧಾರದ ಮೇಲೆಯೇ ಸುಪ್ರೀಂ ಕೋರ್ಟ್ ಮುಂದುವರಿಯಿತು. ಆದರೆ ಹಿಂದೂ ಧರ್ಮ ಒಂದು ಧರ್ಮವಾಗಿದೆ. ಏಕೆ ಎಂದು ನಿಮಗೆ ಹೇಳುತ್ತೇನೆ. ಹಿಂದೂ ಧರ್ಮ ಒಂದು ಧರ್ಮವಲ್ಲದಿದ್ದರೆ, ಆ ಧರ್ಮದ ಸದಸ್ಯರು ಅನುಚ್ಛೇದ 25 (1) ಮತ್ತು 26 (2) ರ ಅಡಿಯಲ್ಲಿ ಹಕ್ಕುಗಳನ್ನು ಹೇಗೆ ಚಲಾಯಿಸುತ್ತಾರೆ? ಆದ್ದರಿಂದ ಹಿಂದೂ ಧರ್ಮ ಒಂದು ಧರ್ಮವೇ ಆಗಿರಬೇಕಿದೆ.

  • ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ವಿನಾಯಕ್ ದಾಮೋದರ್ ಸಾವರ್ಕರ್ ಅವರ ದೃಷ್ಟಿಕೋನವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ.

  • ವಿ ಡಿ ಸಾವರ್ಕರ್‌ ಅವರದ್ದು ಚತುರ ವ್ಯಕ್ತಿತ್ವವಾಗಿತ್ತು. ಸಾವರ್ಕರ್ ಅವರ ಹಿಂದುತ್ವದ ಪ್ರಕರಣಗಳಲ್ಲಿ ಬಹುಃ ಸಾವರ್ಕರ್‌ ಪ್ರಣೀತ ಹಿಂದುತ್ವದ ಆವೃತ್ತಿಯೆಡೆಗೆ ಸುಪ್ರೀಂ ಕೋರ್ಟ್‌ ಗಮನಹರಿಸಬಾರದಿತ್ತು.

  • ಹಿಂದೂ ಧರ್ಮ ಅಸಾಧಾರಣ ಮತ್ತು ಅನನ್ಯವಾದ ಧರ್ಮ. ಭಾರತದಲ್ಲಿ ಜಾತ್ಯತೀತತೆ ಉಳಿಯುತ್ತದೆ ಎನ್ನುವ ಆಶಾವಾದ ಹಿಂದೂ ಧರ್ಮದಿಂದಾಗಿಯೇ ಮೂಡುತ್ತದೆ. ಬಹುತೇಕ ಹಿಂದೂಗಳು ವಿಶಾಲ ದೃಷ್ಟಿಕೋನವುಳ್ಳವರು, ಸಹಿಷ್ಣುಗಳು ಆಗಿದ್ದಾರೆ. ಇತರೆ ಧರ್ಮಗಳ ರೀತಿಯಲ್ಲಿ ಅದು ಧರ್ಮವನ್ನು ಕಾಣುವುದಿಲ್ಲ.

Related Stories

No stories found.
Kannada Bar & Bench
kannada.barandbench.com