ರೋಗಿಗಳ ನಕಲಿ ದಾಖಲಾತಿ: ವೈದ್ಯಕೀಯ ಕಾಲೇಜಿಗೆ ʼಮುನ್ನಾಭಾಯ್ ಎಂಬಿಬಿಎಸ್ʼ ಸಿನಿಮಾ ನೆನಪಿಸಿದ ಸುಪ್ರೀಂ [ಚುಟುಕು]

ರೋಗಿಗಳ ನಕಲಿ ದಾಖಲಾತಿ: ವೈದ್ಯಕೀಯ ಕಾಲೇಜಿಗೆ ʼಮುನ್ನಾಭಾಯ್ ಎಂಬಿಬಿಎಸ್ʼ ಸಿನಿಮಾ ನೆನಪಿಸಿದ ಸುಪ್ರೀಂ [ಚುಟುಕು]

Supreme court and Munnabhai MBBS

ರೋಗಿಗಳ ದಾಖಲಾತಿ ಸಂಖ್ಯೆ ಹೆಚ್ಚಿದೆ ಎಂದು ತೋರಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಖಾಸಗಿ ವೈದ್ಯಕೀಯ ಕಾಲೇಜೊಂದಕ್ಕೆ ಸುಪ್ರೀಂಕೋರ್ಟ್‌ ಖಡಕ್‌ ಎಚ್ಚರಿಕೆ ನೀಡಿತು. ಆಸ್ಪತ್ರೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರನ್ನುದ್ದೇಶಿಸಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ಸೂರ್ಯಕಾಂತ್‌ ಅವರಿದ್ದ ವಿಭಾಗೀಯ ಪೀಠ “ಯಾವುದೇ ತೊಂದರೆ ಇಲ್ಲದಿದ್ದರೂ ಮಕ್ಕಳನ್ನು ದಾಖಲಿಸಿಕೊಂಡ ಪ್ರಕರಣ ಇದು. ನೀವು ʼಮುನ್ನಾಭಾಯ್ ಎಂಬಿಬಿಎಸ್ʼ ಚಲನಚಿತ್ರ ನೋಡಿದ್ದೀರಾ ವಕೀಲರೇ, ಆಸ್ಪತ್ರೆಯೇ ನಕಲಿ ರೋಗಿಗಳನ್ನು ದಾಖಲಿಸಿಕೊಳ್ಳುವುದಾದರೂ ಹೇಗೆ? ಸುಳ್ಳೇ ಅವರು ದಾಖಲೆಗಳನ್ನು ಸೃಷ್ಟಿಸುತ್ತಿರುವ ಪ್ರಕರಣ ಇದು” ಎಂದು ಕಿಡಿಕಾರಿತು.

ಅಂತಿಮವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಬದಿಗೆ ಸರಿಸಿದ ನ್ಯಾಯಾಲಯ ಮತ್ತೆ ಹೊಸದಾಗಿ ಪ್ರಕರಣವನ್ನು ಪರಿಗಣಿಸಿ ನಿರ್ಧರಿಸುವಂತೆ ಸೂಚಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.