ದೋಣಿ ಆಂಬ್ಯುಲೆನ್ಸ್, ಪ್ರತ್ಯೇಕವಾಸ ಸೌಲಭ್ಯ; ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪರಿಹಾರ ಕಾರ್ಯಕ್ಕೆ ಐಡಿಐಎ ನೆರವು

ಮೂಲಸೌಕರ್ಯ ಮತ್ತು ನೆರವಿನ ಕೊರತೆ ಇರುವ ಕೋವಿಡ್ ಪೀಡಿತ ಹಳ್ಳಿಗಳಲ್ಲಿ ಐಡಿಐಎ ಹಲವು ಕ್ರಮಗಳನ್ನು ಕೈಗೊಂಡಿದೆ.
ದೋಣಿ ಆಂಬ್ಯುಲೆನ್ಸ್, ಪ್ರತ್ಯೇಕವಾಸ ಸೌಲಭ್ಯ; ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪರಿಹಾರ ಕಾರ್ಯಕ್ಕೆ ಐಡಿಐಎ ನೆರವು

ಮೂಲಸೌಕರ್ಯ ಹಾಗೂ ನೆರವಿನ ಕೊರತೆ ಇರುವ ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಸೋಂಕನ್ನು ಎದುರಿಸಲು 'ಇನ್‌ಕ್ರೀಸಿಂಗ್ ಡೈವರ್ಸಿಟಿ ಬೈ ಇನ್‌ಕ್ರೀಸಿಂಗ್‌ ಆಕ್ಸೆಸ್‌ ಟು ಲೀಗಲ್‌ ಎಜುಕೇಷನ್‌' (ಐಡಿಐಎ) ಸಂಸ್ಥೆಯು ನೆರವಿನ ಹಸ್ತ ಚಾಚಿದೆ. ಇದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳ ಜೊತೆ ಸಂಸ್ಥೆಯು ಕೈಜೋಡಿಸಿದ್ದು ಗ್ರಾಮೀಣ ಪ್ರದೇಶದ ಸೋಂಕಿತರಿಗೆ ನೆರವಾಗುವ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಂಡಿದೆ.

ಪ್ರತ್ಯೇಕವಾಸ ಕೇಂದ್ರಗಳು

ಕೋವಿಡ್‌ ಸೌಮ್ಯ ರೋಗಲಕ್ಷಣ ಇರುವವರಿಗಾಗಿ ಹಳ್ಳಿಗಳಲ್ಲಿ ಐಡಿಐಎ ಪ್ರತ್ಯೇಕವಾಸದ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಸ್ವಯಂ ಪ್ರತ್ಯೇಕವಾಸದಲ್ಲಿರಲು ಮುಂದಾಗುವ ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಸೌಲಭ್ಯ, ಉಪಕರಣಗಳಂತಹ ಸಂಪನ್ಮೂಲಗಳು ದೊರೆಯುವುದಿಲ್ಲ. ಈ ಪ್ರತ್ಯೇಕ ಕೇಂದ್ರಗಳಲ್ಲಿ ಹಾಸಿಗೆ, ಔಷಧ, ಆಮ್ಲಜನಕ ಮಾಪಕ, ಉಷ್ಣಮಾಪಕ ಮತ್ತಿತರ ಮೂಲಭೂತ ಅಗತ್ಯಗಳನ್ನು ಒದಗಿಸಲಾಗುತ್ತಿದೆ. ವೀಡಿಯೊ ಕಾಲ್‌ ಮೂಲಕ ವೈದ್ಯರನ್ನು ಸಂಪರ್ಕಿಸುವ ಸೌಲಭ್ಯವಿದೆ. ಒಂದು ವೇಳೆ ರೋಗ ಉಲ್ಬಣಗೊಂಡರೆ ರೋಗಿಗಳನ್ನು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ದೋಣಿ ಆಂಬುಲೆನ್ಸ್‌

ಸುಂದರಬನ್ ಪ್ರದೇಶದ ಅನೇಕ ಕುಗ್ರಾಮಗಳನ್ನು ಜಲಮಾರ್ಗದ ಮೂಲಕ ತಲುಪಲು ಸಾಧ್ಯ. ಇಲ್ಲಿನ ಜನ ನದಿಗಳನ್ನು ದಾಟಲು ಸಾರ್ವಜನಿಕ ಸಾರಿಗೆಯಾಗಿ ದೋಣಿಗಳನ್ನು ಬಳಸುತ್ತಿದ್ದು ಐಡಿಐಎ ಈ ಭಾಗದಲ್ಲಿ ದೋಣಿ ಆಂಬುಲೆನ್ಸ್‌ಗಳಿಗೆ ಚಾಲನೆ ನೀಡುತ್ತಿದೆ. ಈ ಈ ಆಂಬ್ಯುಲೆನ್ಸ್‌ಗಳು ಆಸ್ಪತ್ರೆಗೆ ತಲುಪಲು ತೆಗೆದುಕೊಳ್ಳುವ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

ಸುಂದರಬನ್ ಪ್ರದೇಶದ ಕುಗ್ರಾಮವಾದ ಪಥರ್‌ಪ್ರತಿಮಾ ಪೊಲೀಸ್‌ ಠಾಣಾ ವ್ಯಾಪ್ತಿಯ ಪುರ್ಬಶ್ರೀಪಥಿನಗರದಲ್ಲಿ ಅಂತಹ ಮೊದಲ ಆಂಬುಲೆನ್ಸ್‌ ಸೇವೆಗೆ ಸಿದ್ಧವಾಗಿದೆ. ಇದರಲ್ಲಿ ಔಷಧ, ಉಷ್ಣಮಾಪಕ, ಪಲ್ಸ್‌ ಆಕ್ಸಿಮೀಟರ್‌, ಸ್ಯಾನಿಟೈಸರ್, ಖನಿಜಯುಕ್ತ ನೀರು, ರೋಗಿಗಳ ಸೇವೆ ಮಾಡುವವರಿಗೆ ಪಿಪಿಇ ಕಿಟ್, ಅಂಬಿಗರನ್ನು ಒದಗಿಸಲಾಗಿದೆ. ಇಂತಹ ಅನೇಕ ಆಂಬುಲೆನ್ಸ್‌ಗಳನ್ನು ಸ್ಥಾಪಿಸುವ ಆಶಯ ಐಡಿಐಎ ಸಂಸ್ಥೆಯದ್ದು.

ಪಶ್ಚಿಮ ಬಂಗಾಳ ಸಂಪನ್ಮೂಲ ಮಾಹಿತಿಕೋಶ

ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಿಗೆ ಐಡಿಐಎ ಸಂಪನ್ಮೂಲಗಳ ದತ್ತಾಂಶಕೋಶ ಸಿದ್ಧಪಡಿಸಿದೆ, ಇದು ಕೋವಿಡ್‌ ವಿರುದ್ಧ ಹೋರಾಡುವವರಿಗೆ ಉಪಯುಕ್ತವಾಗಿದೆ. ಇದರ ಬಗ್ಗೆ ಇಲ್ಲಿ ಮಾಹಿತಿ ಪಡೆಯಬಹುದು.

ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಾಂದ್ರಕಗಳು, ಪ್ಲಾಸ್ಮಾ / ರಕ್ತದಾನ ಕೇಂದ್ರಗಳು, ಆಂಬ್ಯುಲೆನ್ಸ್ ಸೇವೆಗಳು, ಕೋವಿಡ್ ಪರೀಕ್ಷಾ ಕೇಂದ್ರಗಳು, ಮನೆಯ ಆರೈಕೆ ಸೌಲಭ್ಯಗಳು, ವೈದ್ಯರೊಂದಿಗೆ ಆನ್‌ಲೈನ್ ಸಮಾಲೋಚನೆ ಮತ್ತು ಆಹಾರ ವಿತರಣಾ ಸೇವೆಗಳ ವಿವರ ಇದರಲ್ಲಿ ಲಭ್ಯವಿದೆ.

ದಿನವಿಡೀ ಕೆಲಸ ಮಾಡುತ್ತಿರುವ ಸುಮಾರು 40 ಸ್ವಯಂಸೇವಕರ ತಂಡ ದತ್ತಾಂಶಕೋಶದ ವಿವರಗಳನ್ನು ನಿಯಮಿತವಾಗಿ ಪರಿಶೀಲಿಸಿ ನವೀಕರಿಸುತ್ತಿದೆ. ದತ್ತಾಂಶಕೋಶದ ಮಾಹಿತಿ ಪಡೆಯಲು/ ಅರ್ಥ ಮಾಡಿಕೊಳ್ಳುವಲ್ಲಿ ಯಾವುದೇ ತೊಂದರೆ ಎದುರಿಸುತ್ತಿರುವವರಿಗೆ ಐಡಿಐಎ ಸಹಾಯವಾಣಿಯನ್ನು ಕೂಡ ಸ್ಥಾಪಿಸಿದೆ. ಸ್ವಯಂಸೇವಕರು ಈ ಕೆಳಗಿನ ಸಂಖ್ಯೆಗಳಲ್ಲಿ ಬೆಳಿಗ್ಗೆ 10:30 ರಿಂದ ಸಂಜೆ 7:30 ರವರೆಗೆ ಲಭ್ಯವಿರುತ್ತಾರೆ: +91 8972240058, +91 7207161695, +91 8240798829

ಐಡಿಐಎ ಕೈಗೆತ್ತಿಕೊಂಡಿರುವ ಪರಿಹಾರ ಕಾರ್ಯಗಳು

ಮುಖಗವಸು, ಸಾಬೂನು ಇತ್ಯಾದಿಗಳ ವಿತರಣೆಗೆ ಅವಕಾಶ ಕಲ್ಪಿಸುವ ಕೋವಿಡ್‌ 19 ಸೆನ್ಸಿಟೈಸೇಷನ್‌ ಡ್ರೈವ್‌ಗಳ ಆರಂಭ.

ರಕ್ತದಾನ ಶಿಬಿರಗಳಿಗೆ ಚಾಲನೆ.

ಪಶ್ಚಿಮ ಬಂಗಾಳದ ಗ್ರಾಮೀಣ ಕೇಂದ್ರಗಳಲ್ಲಿ ಆಕ್ಸಿಮೀಟರ್ ತಪಾಸಣೆ ಸೇರಿದಂತೆ ವೈದ್ಯಕೀಯ ಪರೀಕ್ಷೆಗಳ ಆಯೋಜನೆ.

ಕೊಡುಗೆ ಮತ್ತು ಸ್ವಯಂಸೇವೆ ಮೂಲಕ ಯಾರು ಬೇಕಾದರೂ ಐಡಿಐಎ ಕಾರ್ಯಗಳಿಗೆ ನೆರವಾಗಲು ಅವಕಾಶವಿದೆ. ಸಂಪರ್ಕಿಸಬೇಕಾದ ಜಾಲತಾಣ https://bit.ly/idia-response-to-covid19 .

ಸ್ವಯಂ ಸೇವಕರಾಗಲು ಇಚ್ಛಿಸುವವರು ದಯವಿಟ್ಟು arnab@idialaw.org ಗೆ ಇಮೇಲ್‌ ಕಳುಹಿಸಲು ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com