![[ಸಂವಿಧಾನ ದಿನದ ವಿಶೇಷ] ಮೂಲ ಸಂವಿಧಾನದಲ್ಲಿನ ಭಾರತದ ಶ್ರೀಮಂತ, ಸಾಂಸ್ಕೃತಿಕ ಇತಿಹಾಸ ಬಿಂಬಿಸುವ ಚಿತ್ರಗಳ ನೋಟ](http://media.assettype.com/barandbench-kannada%2F2021-11%2Ff2f6312e-3205-4578-94ed-a11bf6ba59f3%2FBose_Constitution.png?w=480&auto=format%2Ccompress&fit=max)
ದೇಶದಲ್ಲಿ ಸಂವಿಧಾನ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮೂಲ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವ ಚಿತ್ರ ಸರಣಿಗಳನ್ನು ಇಲ್ಲಿ ನೀಡಲಾಗಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಮೂಲ ಸಂವಿಧಾನದಲ್ಲಿ ಅಳವಡಿಸಲಾಗಿರುವ ಈ ಚಿತ್ರಗಳು ಬಿಂಬಿಸುತ್ತವೆ.
ಸಂವಿಧಾನ ರಚನೆಯಾಗಿ ಏಳು ದಶಕಗಳೇ ಸಂದಿದ್ದರೂ ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿರುವ ಮಾತುಗಳು ಇಂದಿಗೂ ದಿಟವಾಗಿದೆ:
ಇಂದಿನ ವಿಭಜನಕಾರಿಯಾದ ಕಾಲಘಟ್ಟದಲ್ಲಿ ಸಂವಿಧಾನ ನಿರ್ಮಾತೃಗಳು ಹೊಂದಿದ್ದ ಭಾರತದ ಕಲ್ಪನೆಯನ್ನು ನಾವು ನೆನಪಿಸಿಕೊಳ್ಳುವುದು ಉತ್ತಮ. ಮೂಲಕೃತಿಯಲ್ಲಿರುವ ಚಿತ್ರಗಳು ಈ ಕಲ್ಪನೆಯನ್ನು ಕಟ್ಟಿಕೊಡುತ್ತವೆ.
ಭಾರತದ ಸಂಸ್ಕೃತಿ ಮತ್ತು ಇತಿಹಾಸದ ದೃಷ್ಟಾಂತಗಳನ್ನು ಈ ಚಿತ್ರಗಳು ಪರಿಚಯಿಸುತ್ತವೆ.
ಸೂಚನೆ: ಮೂಲ ಸಂವಿಧಾನದ ಭಾಗಶಃ ಹೆಸರುಗಳನ್ನು ಹಲವು ವರ್ಷಗಳಿಂದ ವಿವಿಧ ತಿದ್ದುಪಡಿಗಳ ಮೂಲಕ ಮಾರ್ಪಡಿಸಲಾಗಿದೆ.