ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಎಐಎಲ್ಇಟಿ (ಅಖಿಲ ಭಾರತ ಕಾನೂನು ಪ್ರವೇಶ ಪರೀಕ್ಷೆ) 2020ರ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ.
ವಿವಿಯ ಬಿಎ ಎಲ್ ಎಲ್ ಬಿ (ಆನರ್ಸ್) ಮತ್ತು ಎಲ್ಎಲ್ಎಂ ಕೋರ್ಸುಗಳಿಗೆ ಪ್ರವೇಶ ಕಲ್ಪಿಸಲು ಸೆ. 26ರಂದು ಪರೀಕ್ಷೆ ನಡೆಸಲಾಗಿತ್ತು.
ಪದವಿ ಕೋರ್ಸ್‌ಗೆ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿದ್ದು, ಎಲ್ ಎಲ್ ಎಂ. ಅಕ್ಟೋಬರ್ 9 ರಿಂದ ಎಲ್ ಎಲ್ ಎಂ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ.
ಅಭ್ಯರ್ಥಿಗಳು ಇಲ್ಲಿ ಲಾಗಿನ್ ಆಗಿ ಫಲಿತಾಂಶಗಳನ್ನು ವೀಕ್ಷಿಸಬಹುದು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೊಡಗೂಡಿ (ಎನ್ ಎಲ್ ಟಿ) ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಈ ವರ್ಷ ಸೆಂಟರ್ ಬೇಸ್ಡ್ ರಿಮೋಟ್ ಪ್ರಾಕ್ಟರಡ್ ಟೆಸ್ಟ್ ಆಯೋಜಿಸಿತ್ತು.
ಪದವಿ ಪ್ರವೇಶಾತಿ ಪರೀಕ್ಷೆ ಫಲಿತಾಂಶಗಳ ವಿವರ ಇಲ್ಲಿದೆ: