ಮಾನವ ಹಕ್ಕುಗಳ ಆಯೋಗದ ನಿರ್ಣಯ ತಡೆಯಲು ರಾಜ್ಯ ಸರ್ಕಾರಕ್ಕೆ ವಿವೇಚನಾಧಿಕಾರ ಇಲ್ಲ: ಮದ್ರಾಸ್ ಹೈಕೋರ್ಟ್

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ನ್ಯಾಯಾಲಯ 2017ರಲ್ಲಿ ವಿಭಾಗೀಯ ಪೀಠ ನೀಡಿದ ಉಲ್ಲೇಖವನ್ನು ಆಧರಿಸಿ ತೀರ್ಪು ನೀಡಿತು.
ಮಾನವ ಹಕ್ಕುಗಳ ಆಯೋಗದ ನಿರ್ಣಯ ತಡೆಯಲು ರಾಜ್ಯ ಸರ್ಕಾರಕ್ಕೆ  ವಿವೇಚನಾಧಿಕಾರ ಇಲ್ಲ: ಮದ್ರಾಸ್ ಹೈಕೋರ್ಟ್

1993ರ ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ ಸೆಕ್ಷನ್ 18ರ ಅಡಿಯಲ್ಲಿ ಮಾನವ ಹಕ್ಕುಗಳ ಆಯೋಗ ಕೈಗೊಳ್ಳುವ ನಿರ್ಣಯಗಳು ಅವಿಚ್ಛಿನ್ನವಾಗಿದ್ದು ಅದನ್ನು ಜಾರಿಗೆ ತರುವುದನ್ನು ತಡೆಯುವ ಯಾವುದೇ ವಿವೇಚನಾಧಿಕಾರ ರಾಜ್ಯಕ್ಕೆ ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಪೂರ್ಣ ಪೀಠ ಮಹತ್ವದ ತೀರ್ಪು ನೀಡಿದೆ. (ಅಬ್ದುಲ್ ಸತ್ತರ್‌ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಮತ್ತಿತರರ ನಡುವಣ ಪ್ರಕರಣ).

1993ರ ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ ಸೆಕ್ಷನ್ 18ರ ಅಡಿಯಲ್ಲಿ ಮಾನವ ಹಕ್ಕುಗಳ ಆಯೋಗ ಕೈಗೊಂಡ ನಿರ್ಧಾರಗಳು ಅವಿಚ್ಛಿನ್ನವಾಗಿದ್ದು ಅದನ್ನು ಜಾರಿಗೆ ತರುವುದನ್ನು ತಡೆಯುವ ಯಾವುದೇ ವಿವೇಚನಾಧಿಕಾರ ರಾಜ್ಯಕ್ಕೆ ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಪೂರ್ಣ ಪೀಠ ಮಹತ್ವದ ತೀರ್ಪು ನೀಡಿದೆ. (ಅಬ್ದುಲ್ ಸತ್ತರ್‌ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಮತ್ತಿತರರ ನಡುವಣ ಪ್ರಕರಣ).

ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ:

  • ಕಾಯಿದೆಯ ಸೆಕ್ಷನ್ 18 ರ ಅಡಿಯಲ್ಲಿ ಮಾನವ ಹಕ್ಕುಗಳ ಆಯೋಗ ಮಾಡಿರುವ ಶಿಫಾರಸು ಕಾನೂನುಬದ್ಧವಾಗಿದ್ದು ತಕ್ಷಣವೇ ಜಾರಿಗೊಳಿಸಬಹುದಾಗಿದೆ.

  • ಸೆಕ್ಷನ್ 18 (ಇ) ಅಡಿಯಲ್ಲಿ ನಿಗದಿಪಡಿಸಿದ ಗಡುವಿನೊಳಗೆ (ಆಯೋಗದ ನಿರ್ಧಾರಗಳನ್ನು) ಕಾರ್ಯರೂಪಕ್ಕೆ ತರಲು ಸಂಬಂಧಪಟ್ಟ ಸರ್ಕಾರ ಅಥವಾ ಅಧಿಕಾರಿಗಳು ವಿಫಲವಾದರೆ ಆಯೋಗ ಸಾಂವಿಧಾನಿಕ ನ್ಯಾಯಾಲಯವನ್ನು ಆಯೋಗವು ಸೂಕ್ತವಾದ ರಿಟ್ / ಆದೇಶ / ನಿರ್ದೇಶನ ನೀಡುವ ಮೂಲಕ ಸೆಕ್ಷನ್ 18 (ಇ) ಅಡಿಯಲ್ಲಿ ನ್ಯಾಯಾಲಯದ ಮೊರೆ ಹೋಗಬಹುದು.

  • ನ್ಯಾಯಾಲಯದ ಪ್ರಕಾರ, ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವುದನ್ನು ಆಯೋಗ ಕಂಡುಕೊಂಡರೆ, ದೂರುದಾರ ಅಥವಾ ಸಂತ್ರಸ್ತ ಅಥವಾ ಅವರ ಕುಟುಂಬಕ್ಕೆ ಪರಿಹಾರ ಒದಗಿಸಲು; ಸಂಬಂಧಪಟ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಥವಾ ಇತರ ಸೂಕ್ತ ಕ್ರಮಗಳನ್ನು ಕೈಗೊಳ್ಳಲು; ಆಯೋಗವು ಸೂಕ್ತವೆಂದು ಭಾವಿಸುವಂತಹ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು. ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸು ಮಾಡಬಹುದು.

  • ಸೆಕ್ಷನ್ 18 ರ ಉಪ ಷರತ್ತು (ಇ) ಪ್ರಕಾರ ಆಯೋಗಕ್ಕೆ ಕೈಗೊಂಡ ಅಥವಾ ತೆಗೆದುಕೊಳ್ಳಬೇಕಾದ ಕ್ರಮ ಕುರಿತಂತೆ ವರದಿಯ ಬಗ್ಗೆ ತನ್ನ ಅಭಿಪ್ರಾಯ ತಿಳಿಸಲು ಸರ್ಕಾರ ಕಾನೂನುಬದ್ಧ ಹೊಣೆಗಾರಿಕೆ ಹೊಂದಿರುತ್ತದೆ.

  • ಆಯೋಗದ ಶಿಫಾರಸು ತಪ್ಪಿಸಲು ಸರ್ಕಾರಕ್ಕೆ ಯಾವುದೇ ವಿವೇಚನಾಧಿಕಾರ ಇಲ್ಲ. ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ ನ್ಯಾಯಾಲಯದಲ್ಲಿ ಕಾನೂನು ಪರಿಹಾರವನ್ನು ಮಾತ್ರ ರಾಜ್ಯ ಸರ್ಕಾರ ಆಶ್ರಯಿಸಬಹುದು ಇತ್ಯಾದಿ ಅಂಶಗಳನ್ನು ನ್ಯಾಯಾಲಯ ವಿವರಿಸಿದೆ.

ʼಮಾನವ ಹಕ್ಕುಗಳ ಆಯೋಗಕ್ಕೆ ಬಲ ತುಂಬಲು ಸಂಬಂಧಪಟ್ಟ ಕಾಯಿದೆಗೆ ತಿದ್ದುಪಡಿ ಅಗತ್ಯʼ

ಮಾನವ ಹಕ್ಕು ಆಯೋಗ ತನ್ನ ಶಿಫಾರಸನ್ನು ತಾನೇ ಜಾರಿಗೆ ತರಲು ಅನುಕೂಲ ಕಲ್ಪಿಸುವಂತೆ ಮಾನವ ಹಕ್ಕು ಕಾಯಿದೆಯನ್ನು ಸ್ವಾಯತ್ತ ಕಾನೂನಾಗಿಸುವ ನಿಟ್ಟಿನಲ್ಲಿ ಶಾಸನಾತ್ಮಕ ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ನ್ಯಾಯಾಲಯ ತೀರ್ಪು ನೀಡುವ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.

ಕಾಯಿದೆಯ ಅಂತರ್ಗತ ನಿಬಂಧನೆಗಳ ಅನುಪಸ್ಥಿತಿಯಲ್ಲಿ, ಮಾನವ ಹಕ್ಕುಗಳ ಆಯೋಗದ ಶಿಫಾರಸುಗಳಿಗೆ ಕಾನೂನು ಮನ್ನಣೆಯ ಕೊರತೆ ಉಂಟಾಗುತ್ತದೆ . ಆದ್ದರಿಂದ ಅದನ್ನು ಕ್ಷುಲ್ಲಕಗೊಳಿಸುವ ಸಾಧ್ಯತೆಗಳಿವೆ ಎಂಬ ಗ್ರಹಿಕೆ ಇದೆ. ಲಿಖಿತ ಸಂವಿಧಾನ ಸರ್ವೋಚ್ಛ ಆಳ್ವಿಕೆ ನಡೆಸುತ್ತಿರುವ ಮತ್ತು ಅದನ್ನು ಆಡಳಿತದ ಮಹೋನ್ನತ ಪೀಠದ ಮೇಲೆ ಇರಿಸಲಾಗಿರುವ ದೇಶದಲ್ಲಿ ಆಯೋಗದ ಬಗೆಗಿನ ಇಂತಹ ದೃಷ್ಟಿಕೋನ ಮಾನವ ಹಕ್ಕುಗಳ ಉಲ್ಲಂಘನೆಯ ದೂರುಗಳನ್ನು ಪರಿಹರಿಸಲು ಉತ್ತಮವಾಗಿರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ವಕೀಲ ಬಿ.ವಿಜಯ್ ಅವರು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಾಯ ಮಾಡಿದರು. ಅರ್ಜಿದಾರರ ಪರ ವಕೀಲರಾದ ಆರ್ ಶ್ರೀನಿವಾಸ್ ಮತ್ತು ಅರುಣ್ ಅನ್ಬುಮಣಿ ಹಾಜರಾದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಶಂಕರ ನಾರಾಯಣ್, ಕೇಂದ್ರ ಸರ್ಕಾರದ ಸ್ಥಾಯಿ ವಕೀಲರಾದ ಎಂ ಪಿ ಜೈಷಾ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ನರ್ಮತಾ ಸಂಪತ್ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com