ಎಸ್‌ಸಿ, ಎಸ್‌ಟಿ ಕಾಯಿದೆ ವ್ಯಾಪ್ತಿಗೆ ಆನ್‌ಲೈನ್‌ ನಿಂದನೆ: ಸಂತ್ರಸ್ತೆಯ ಭೌತಿಕ ಹಾಜರಿ ಅನಗತ್ಯ ಎಂದ ಕೇರಳ ಹೈಕೋರ್ಟ್

ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಸಂದರ್ಶನದ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯನ್ನು ಅವಮಾನಿಸಿದ ಆರೋಪ ಎದುರಿಸುತ್ತಿದ್ದ ಯೂಟ್ಯೂಬರ್ ಒಬ್ಬರಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
Justice Bechu Kurian Thomas with Kerala HC
Justice Bechu Kurian Thomas with Kerala HC

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯ ವಿರುದ್ಧ ಆನ್‌ಲೈನ್ ಮೂಲಕ ಮಾಡಿದ ನಿಂದನೆ ಅಪಮಾನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ (ಎಸ್‌ಸಿ ಎಸ್‌ಟಿ ಕಾಯಿದೆ) ವ್ಯಾಪ್ತಿಗೆ ಬರುತ್ತವೆ ಎಂದು ಕೇರಳ ಹೈಕೋರ್ಟ್‌ ಮಂಗಳವಾರ ಹೇಳಿದೆ [ಸೂರಜ್‌ ವಿ ಸುಕುಮಾರ್‌ ಮತ್ತು ಕೇರಳ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ಆ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಸಂದರ್ಶನದ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯನ್ನು ಅವಮಾನಿಸಿದ ಆರೋಪ ಎದುರಿಸುತ್ತಿದ್ದ ಯೂಟ್ಯೂಬರ್‌ ಒಬ್ಬರಿಗೆ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಜಾಮೀನು ನಿರಾಕರಿಸಿದರು.

Also Read
ಉತ್ತರಾಖಂಡ ಚುನಾವಣೆ: ವರ್ಚುವಲ್ ಸಮಾವೇಶ, ಆನ್‌ಲೈನ್‌ ಮತದಾನ ಪರಿಗಣಿಸುವಂತೆ ಆಯೋಗಕ್ಕೆ ಕೇಳಿದ ಉತ್ತರಾಖಂಡ ಹೈಕೋರ್ಟ್

"ಅಂತರ್ಜಾಲದ ಮೂಲಕ ವ್ಯಕ್ತಿಗಳ ಡಿಜಿಟಲ್ ಉಪಸ್ಥಿತಿಯು ಸೆಕ್ಷನ್‌ 3(1)(ಆರ್‌) ಮತ್ತು 3(1)(ಎಸ್‌) ಅಡಿ 'ಸಾರ್ವಜನಿಕ ನೋಟ' ಪದದ ಪರಿಕಲ್ಪನೆ, ಉದ್ದೇಶ ಮತ್ತು ಅರ್ಥಕ್ಕೆ ಬದಲಾವಣೆ ತಂದಿದೆ. ಸಂತ್ರಸ್ತೆ ಈಗಾಗಲೇ ಅಂತರ್ಜಾಲಕ್ಕೆ ಹಾಕಲಾದ ಕಂಟೆಂಟ್‌ಗೆ ಪ್ರವೇಶ ಪಡೆದಾಗ ಆಕೆ ನೇರವಾಗಿ ಮತ್ತು ರಾಚನಿಕವಾಗಿ ಕಾಯಿದೆಯ ದಂಡನೆಯ ನಿಯಮಾವಳಿಗಳನ್ನು ಅನ್ವಯಿಸುವ ಸಲುವಾಗಿ ಹಾಜರಾಗಿರುತ್ತಾಳೆ. ಹೀಗಾಗಿ ಅಂತರ್ಜಾಲದಲ್ಲಿ ಅಪಮಾನಕರ ಅಥವಾ ನಿಂದನೀಯ ಕಂಟೆಂಟ್‌ ಹಾಕಿದ್ದಾಗ ನಿಂದನೆ ಅಥವಾ ಅಪಮಾನಕ್ಕೊಳಗಾದ ಸಂತ್ರಸ್ತೆ ಅದಕ್ಕೆ ಪ್ರತಿ ಬಾರಿ ಪ್ರವೇಶ ಪಡೆದಾಗಲೂ ಆಕೆ ಹಾಜರಿದ್ದಾಳೆ ಎಂದು ಪರಿಗಣಿಸಬಹುದು” ಎಂಬುದಾಗಿ ನ್ಯಾಯಾಲಯ ಹೇಳಿದೆ.

ಡಿಜಿಟಲ್ ಯುಗದಲ್ಲಿ, ವ್ಯಕ್ತಿಯ ಉಪಸ್ಥಿತಿ ಎನ್ನುವುದು ಆನ್‌ಲೈನ್ ಉಪಸ್ಥಿತಿ ಅಥವಾ ಡಿಜಿಟಲ್ ಉಪಸ್ಥಿತಿಯನ್ನು ಕೂಡ ಒಳಗೊಂಡಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮಹಿಳೆಯೊಬ್ಬರ ಲೈಂಗಿಕ ದೌರ್ಜನ್ಯದ ದೂರಿನ ಮೇಲೆ ತನ್ನ ಸಹೋದ್ಯೋಗಿಯೂ ಆದ ಸ್ನೇಹಿತನನ್ನು ಬಂಧಿಸಿದ್ದನ್ನು ಪ್ರಶ್ನಿಸಿ "ಟ್ರೂ ಟಿವಿ" ಎಂಬ ಆನ್‌ಲೈನ್ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಆದೇಶದ ಪೂರ್ಣ ಪ್ರತಿಯನ್ನು ಇಲ್ಲಿ ಓದಿ:

Attachment
PDF
Sooraj_V_Sukumar_v_State_of_Kerala.pdf
Preview

Related Stories

No stories found.
Kannada Bar & Bench
kannada.barandbench.com