ಫೋನ್ ಕದ್ದಾಲಿಕೆ ಬಗೆಗಿನ ಮಾಹಿತಿ ಆರ್‌ಟಿಐ ಕಾಯಿದೆ ಅಡಿ ಬಹಿರಂಗಪಡಿಸುವುದಕ್ಕೆ ವಿನಾಯಿತಿ: ದೆಹಲಿ ಹೈಕೋರ್ಟ್

ಭಾರತದ ಸಾರ್ವಭೌಮತೆ, ಸಮಗ್ರತೆ, ದೇಶದ ಭದ್ರತೆಯ ಹಿತದೃಷ್ಟಿಯಿಂದ ಅವಶ್ಯಕ ಎಂದು ಅಧಿಕೃತ ಅಧಿಕಾರಿಗೆ ಮನದಟ್ಟಾದಾಗ ಅಥವಾ ಅಪರಾಧದ ಪ್ರಚೋದನೆ ತಡೆಗಟ್ಟಲು ಫೋನ್ ಕದ್ದಾಲಿಕೆ ಅಥವಾ ಟ್ರ್ಯಾಕಿಂಗ್‌ಗೆ ಸಂಬಂಧಿಸಿದಂತೆ ಸರ್ಕಾರ ಆದೇಶ ಹೊರಡಿಸುತ್ತದೆ.
Cell phone tower
Cell phone tower

ಫೋನ್ ಕದ್ದಾಲಿಕೆ, ಟ್ಯಾಪಿಂಗ್ ಅಥವಾ ಟ್ರ್ಯಾಕಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯಿದೆ 2005 (ಆರ್‌ಟಿಐ ಕಾಯಿದೆ) ಸೆಕ್ಷನ್ 8 (ಎ) ಅಡಿಯಲ್ಲಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಆರ್‌ಟಿಐ ಕಾಯಿದೆಯ ಸೆಕ್ಷನ್ 8 (ಎ) ಅಡಿ ಈ ಮಾಹಿತಿಯನ್ನು ಆರ್‌ಟಿಐ ಕಾಯಿದೆಯ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ಅದನ್ನು ಬಹಿರಂಗಪಡಿಸುವುದು ದೇಶದ ಭದ್ರತೆ, ಸಮಗ್ರತೆ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳ ಮೇಲೆ ಪೂರ್ವಾಗ್ರಹ ಪೀಡಿತ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ನ್ಯಾಯಮೂರ್ತಿಗಳಾದ ವಿಭು ಬಖ್ರು ಮತ್ತು ಅಮಿತ್ ಮಹಾಜನ್ ಅವರ ನೇತೃತ್ವದ ವಿಭಾಗೀಯ ಪೀಠವು, "ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ದೇಶದ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮಕೈಗೊಳ್ಳುವುದು ಅವಶ್ಯಕ ಎಂದು ಅಧಿಕೃತ ಅಧಿಕಾರಿಗೆ ಮನದಟ್ಟಾದಾಗ ವಿದೇಶಗಳೊಂದಿಗೆ ಸ್ನೇಹ ಸಂಬಂಧಗಳು ಅಥವಾ ಸಾರ್ವಜನಿಕ ಸುವ್ಯವಸ್ಥೆ ಅಥವಾ ಅಪರಾಧದ ಪ್ರಚೋದನೆಯನ್ನು ತಡೆಗಟ್ಟಲು ಫೋನ್ ಕದ್ದಾಲಿಕೆ ಅಥವಾ ಟ್ರ್ಯಾಕಿಂಗ್‌ಗೆ ಸಂಬಂಧಿಸಿದಂತೆ ಸಂಬಂಧಿತ ಸರ್ಕಾರಗಳು ಆದೇಶವನ್ನು ಹೊರಡಿಸುತ್ತವೆ" ಎಂದು ಹೇಳಿದ್ದಾರೆ.

ಆದ್ದರಿಂದ, ಅಂತಹ ಆದೇಶವು ಸ್ವಾಭಾವಿಕ ತನಿಖೆಯ ಪ್ರಕ್ರಿಯೆಯಲ್ಲಿ ಹೊರಡಿಸಲ್ಪಟ್ಟಿರಬಹುದು ಎಂದು ನ್ಯಾಯಾಲಯ ಹೇಳಿದೆ. "ಒಂದು ನಿರ್ದಿಷ್ಟ ಪ್ರಕರಣದಲ್ಲಿ, ಅಂತಹ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ತನಿಖೆಯ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭದ್ರತೆ, ರಾಜ್ಯದ ಕಾರ್ಯತಂತ್ರ, ವೈಜ್ಞಾನಿಕ ಮತ್ತು ಆರ್ಥಿಕ ಹಿತಾಸಕ್ತಿ, ವಿದೇಶಗಳೊಂದಿಗಿನ ಸಂಬಂಧ ಅಥವಾ ಅಪರಾಧಕ್ಕೆ ಪ್ರಚೋದನೆಗೆ ಕಾರಣವಾಗಬಹುದು. ಆದ್ದರಿಂದ ಆರ್‌ಟಿಐ ಕಾಯಿದೆಯ ಸೆಕ್ಷನ್ 8ರ ನಿಯಮಗಳ ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್‌) ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ ನಿರ್ದೇಶನಗಳಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಏಕಸದಸ್ಯ ಪೀಠದ ಆದೇಶದ ವಿರುದ್ಧ ಟ್ರಾಯ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

[ತೀರ್ಪು ಓದಿ]

Attachment
PDF
Telecom Regulatory Authority of India v Kabir Shankar Bose & Ors.pdf
Preview

Related Stories

No stories found.
Kannada Bar & Bench
kannada.barandbench.com