ಪ್ರವಾಹದಿಂದ ಕಾರಿಗೆ ಹಾನಿಯಾದರೆ ಅದು ವಾರಂಟಿಯಡಿ ಬರುತ್ತದೆಯೇ? ಎನ್‌ಸಿಡಿಆರ್‌ಸಿ ಆದೇಶಕ್ಕೆ ಸುಪ್ರೀಂ ತಡೆ [ಚುಟುಕು]

ಪ್ರವಾಹದಿಂದ ಕಾರಿಗೆ ಹಾನಿಯಾದರೆ ಅದು ವಾರಂಟಿಯಡಿ ಬರುತ್ತದೆಯೇ? ಎನ್‌ಸಿಡಿಆರ್‌ಸಿ ಆದೇಶಕ್ಕೆ ಸುಪ್ರೀಂ ತಡೆ [ಚುಟುಕು]
A1
Published on

ಪ್ರವಾಹದ ವೇಳೆ ಕಾರಿಗೆ ಉಂಟಾದ ಹಾನಿ ವಾರಂಟಿ (ಖಾತರಿ) ವ್ಯಾಪ್ತಿಗೆ ಒಳಪಡುತ್ತದೆ ಎಂಬ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ. ಕಾರನ್ನು ಉಚಿತವಾಗಿ ರಿಪೇರಿ ಮಾಡುವಂತೆ ಆಯೋಗ ನೀಡಿದ್ದ ಆದೇಶವನ್ನು ಹ್ಯುಂಡೈ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್‌ ನೀಡಿದ್ದು ಆಯೋಗದ ಆದೇಶ ಜಾರಿ ಮಾಡದಂತೆ ತಡೆ ನೀಡಿದೆ. ಪ್ರವಾಹದಿಂದ ಉಂಟಾಗುವ ಹಾನಿಯ ಹೊಣೆಯನ್ನು ತನ್ನ ಮೇಲೆ ಹೊರಿಸಿದರೆ ತನಗೆ ಗಂಭೀರ ನಷ್ಟ ಮತ್ತು ಹಾನಿ ಉಂಟಾಗುತ್ತದೆ ಎಂದು ಹ್ಯುಂಡೈ ಮೇಲ್ಮನವಿಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com